ರಾಮದುರ್ಗ ಲಯನ್ಸ್ ಸಂಸ್ಥೆಯ ನೇತ್ರ ತಪಾಸಣಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಗವಿಸಿದ್ದಪ್ಪ ಮುದಗಲ್, ಗುರುದೇವ ಸಿದ್ದಾಪುರಮಠ, ಗಂಗಾಧರ ಕಂಬಾರ, ಎಸ್.ಎಂ.ಸಕ್ರಿ, ಬಿ.ಪಿ.ಅರಳಿಮಟ್ಟಿ ಇತರರಿದ್ದರು.
Published on:
Copied
Follow Us
ರಾಮದುರ್ಗ: ಪ್ರತಿಪಲ ಅಪೇಕ್ಷಿಸದೆ ಬಡ ಜನತೆಯ ಸೇವೆ ಮಾಡುತ್ತಿರುವ ಲಯನ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಸಂಸ್ಥೆಯ ಜಿಲ್ಲಾ ಗವರ್ನರ್ ಗವಿಸಿದ್ದಪ್ಪ ಮುದಗಲ್ ಹೇಳಿದರು.
ಲಯನ್ಸ್ ಸಂಸ್ಥೆಯ ನೇತ್ರ ತಪಾಸಣಾ ಆಸ್ಪತ್ರೆಯಲ್ಲಿ ಈಚಗೆ ಹಮ್ಮಿಕೊಂಡಿದ್ದ ಸಂಸ್ಥೆಯ ರಾಮದುರ್ಗ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸಂಸ್ಥೆಯ ಪದಾಧಿಕಾರಿಗಳು ಸಮಾಜಮುಖಿ ಕಾರ್ಯ ಮುಂದುವರಿಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ವಕೀಲ ಗುರುದೇವ ಸಿದ್ದಾಪುರಮಠ ಮಾತನಾಡಿ, ವಿವಿಧ ಸಮಾಜಸೇವೆ ನಿರ್ವಹಣೆ ಜತೆಗೆ ಸಂಸ್ಥೆ ಹಲವು ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಮುಂದಿನ ಸದಸ್ಯರು ಸಾಮಾಜಿಕ ಸೇವಾ ಕಾರ್ಯ ಇಮ್ಮಡಿಗೊಳಿಸಬೇಕು ಎಂದರು.
ಸುರೇಬಾನ-ಮನಿಹಾಳ ಗುರುದೇವ ಆತ್ಮಾನಂದ ಸೇವಾಶ್ರಮದ ಸಮರ್ಥ ಶಿವಾನಂದ ಸ್ವಾಮೀಜಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಗಂಗಾಧರ ಕಂಬಾರ, ಕಾರ್ಯದರ್ಶಿ ಎಸ್.ಎಂ.ಸಕ್ರಿ ಹಾಗೂ ಖಜಾಂಚಿ ಬಿ.ಪಿ.ಅರಳಿಮಟ್ಟಿ ಸೇರಿದಂತೆ ಸರ್ವ ಪದಾಧಿಕಾರಿಗಳು ಪದಗ್ರಹಣ ಮಾಡಿದರು.