ಈ ಬಾರಿ ಚಳಿಗಾಲ ಅಧಿವೇಶನದ ಪೂರ್ವ ತಯಾರಿ ಕೆಲಸಗಳು ನ.2ರಿಂದಲೇ ಆರಂಭವಾಗಿದ್ದು, ಸುವರ್ಣ ವಿಧಾನಸೌಧ ಕಟ್ಟಡ ಸ್ವಚ್ಛತೆ, ಮೂರ್ತಿಗಳ ಸ್ವಚ್ಛತೆ, ಸುಣ್ಣ-ಬಣ್ಣ, ಉದ್ಯಾನ ನಿರ್ವಹಣೆ, ಆಲಂಕಾರಿಕ ಗಿಡ, ದೀಪಗಳ ಅಳವಡಿಕೆ, ಪ್ರತಿಭಟನೆ ನಡೆಸುವ ಸ್ಥಳಗಳ ಸ್ವಚ್ಛತೆ, ಪಾರ್ಕಿಂಗ್ ಸ್ಥಳ ಸ್ವಚ್ಛತೆ ಕೆಲಸಗಳಲ್ಲಿ 550ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಮಹಿಳೆಯರು, ಪುರುಷರು ನಿತ್ಯ ಬೆಳಗ್ಗೆ 8 ರಿಂದ ಸಂಜೆ 6ರ ವರೆಗೆ ದುಡಿಯುತ್ತಿದ್ದಾರೆ.