ತೆಲಸಂಗದ ಎಸ್‌ಎಂವೈಕೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಭಾಗೀರಥಿ ಹಾಲಳ್ಳಿ ಅವರನ್ನು ಸನ್ಮಾನಿಸಲಾಯಿತು. ಶಿವಕುಮಾರ ಕೆ., ಡಾ.ಬಿ.ಐ.ಮಠಪತಿ, ಶ್ವೇತಾ ಜುಗಳೆ ಇತರರಿದ್ದರು.
ತೆಲಸಂಗ: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಸಂಶೋಧಕರು ಕೃತಕ ಬುದ್ಧಿಮತ್ತೆಯನ್ನು ಸಶಕ್ತ ಆಯುಧವನ್ನಾಗಿ ಬಳಸಿಕೊಳ್ಳಬೇಕು ಎಂದು ಪ್ರಾಧ್ಯಾಪಕಿ ಡಾ.ಭಾಗೀರಥಿ ಹಾಲಳ್ಳಿ ಕರೆ ನೀಡಿದರು.
ಗ್ರಾಮದ ಎಸ್‌ಎಂವೈಕೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಉಪಕ್ರಮದಡಿ ಮಂಗಳವಾರ ಹಮ್ಮಿಕೊಂಡಿದ್ದ `ಸಂಶೋಧನಾ ಪದ್ಧತಿಯಲ್ಲಿ ಎಐ ಬಳಕೆ' ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಬೃಹತ್ ದತ್ತಾಂಶಗಳ ವಿಶ್ಲೇಷಣೆ, ಸಾಹಿತ್ಯ ಸಮೀಕ್ಷೆ ಹಾಗೂ ಸಂಶೋಧನಾ ಪ್ರಬಂಧಗಳ ರಚನೆಯಲ್ಲಿ ಎಐ ತಂತ್ರಜ್ಞಾನ ಸಮಯ ಉಳಿಸುವುದಲ್ಲದೆ, ನಿಖರತೆ ಹೆಚ್ಚಿಸುತ್ತದೆ. ಆದರೆ, ಇದನ್ನು ಬಳಸುವಾಗ ಸಂಶೋಧಕರು ನೈತಿಕತೆ ಮತ್ತು ಸ್ವಂತಿಕೆ ಮರೆಯಬಾರದು ಎಂದರು.
ಪ್ರಾಂಶುಪಾಲ ಶಿವಕುಮಾರ ಕೆ. ಮಾತನಾಡಿ, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗುಣಮಟ್ಟದ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಶಿಸಿದರು.
ಸಂಯೋಜಕ ಡಾ.ಬಿ.ಐ.ಮಠಪತಿ, ಸಹ ಸಂಯೋಜಕಿ ಶ್ವೇತಾ ಜುಗಳೆ, ಪ್ರಾಧ್ಯಾಪಕರಾದ ಪ್ರೀತಿ ಎನ್.ಎಸ್., ರಮ್ಯಾ ಜೆ., ಹೇಮಾ ತುಂಬರಮಟ್ಟಿ, ಪ್ರೀತಿ ಆರ್.ವಿ., ವಿಶ್ವನಾಥ ಪಾಟೀಲ, ಡಾ.ಡಿ.ಬಿ.ಬಿರಾದಾರ, ಡಾ.ಸುಭಾಸ ಕಾಂಬ್ಳೆ ಇತರರಿದ್ದರು.