ಬಳಿಕ ತಹಸೀಲ್ದಾರ್ ಸಿದ್ದರಾಯ ಭೋಸಗಿ ಮಾತನಾಡಿ, ಈ ಮೊದಲು ಇಲ್ಲಿ ವಾಸಿಸುವ ಜನರಿಗಾಗಿಯೇ 8 ಎಕರೆ ಜಮೀನು ನೀಡಿದ್ದು, ಈಗ ಸರ್ಕಾರ ಜಾಗ ಇಲ್ಲದೆ ಇರುವ ಕುಟುಂಬಕ್ಕೆ ಜಾಗ ನೀಡಬೇಕು ಎಂದು ಆದೇಶ ನೀಡಿದೆ. ಇದರಿಂದ ವಾಸಿಸಲು ಮನೆಗಳಿದ್ದರೂ ಸರ್ಕಾರಿ ಜಾಗ ಸಿಗುತ್ತದೆ ಎಂಬ ಆಸೆಯಿಂದ ಕಾನೂನು ಬಾಹಿರವಾಗಿ ಮತ್ತೆ ಶೆಡ್ ನಿರ್ಮಿಸಿಕೊಳ್ಳುತ್ತಿದ್ದಾರೆ. ಇವರಿಗೆ ಮನೆ ಹಕ್ಕು ಪತ್ರ ಸಿಗುವುದಿಲ್ಲ. ಸರ್ಕಾರಿ ಜಾಗ ಅತಿಕ್ರಮಿಸಿ ಶೆಡ್ ನಿರ್ಮಿಸಿಕೊಂಡವರು ಸೋಮವಾರದೊಳಗೆ ತೆರವುಗೊಳಿಸಬೇಕು. ಸ್ಪಂದಿಸದಿದ್ದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಶೆಡ್ ತೆರವುಗೊಳಿಸುತ್ತೇವೆ ಎಂದು ತಿಳಿಸಿದರು. ತಾಪಂ ಇಒ ಶಿವಾನಂದ ಕೊಲ್ಲಾಪುರ, ಕಂದಾಯನಿರೀಕ್ಷಕ ಸಂಜೀವ ರಾಠೋಡ, ಗ್ರಾಮಾಡಳಿತಾಧಿಕಾರಿ ಕಲ್ಮೇಶ ಕಲಮಡಿ, ಬಸವರಾಜ ಹನ್ನೂರ ಇತರರಿದ್ದರು.