ಮುಂದುವರಿದ ಅಮ್ಮಿನಬಾವಿ ಗ್ರಾಮಸ್ಥರ ಹೋರಾಟ

ಸ್ಮಶಾನ ಭೂಮಿಗಾಗಿ ಆಗ್ರಹಿಸಿ ಅಮ್ಮಿನಬಾವಿ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ಗೆ ಮನವಿ ಸಲ್ಲಿಸಿದರು. ಗಿರೀಶ ಪಾಟೀಲ, ಪ್ರವೀಣ ಪಾಟೀಲ, ಶಿವಗೌಡ ಪಾಟೀಲ, ರಾಜು ಮಗದುಮ್ಮ, ಬಸವರಾಜ ಹುಣಶ್ಯಾಳಿ ಇತರರಿದ್ದರು.
ಸ್ಮಶಾನ ಭೂಮಿಗಾಗಿ ಆಗ್ರಹಿಸಿ ಅಮ್ಮಿನಬಾವಿ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ಗೆ ಮನವಿ ಸಲ್ಲಿಸಿದರು. ಗಿರೀಶ ಪಾಟೀಲ, ಪ್ರವೀಣ ಪಾಟೀಲ, ಶಿವಗೌಡ ಪಾಟೀಲ, ರಾಜು ಮಗದುಮ್ಮ, ಬಸವರಾಜ ಹುಣಶ್ಯಾಳಿ ಇತರರಿದ್ದರು.
Published on
ಸಂಕೇಶ್ವರ: ಸ್ಮಶಾನ ಭೂಮಿಗಾಗಿ ಆಗ್ರಹಿಸಿ ಸಮೀಪದ ಅಮ್ಮಿನಬಾವಿ ಗ್ರಾಮದ ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿರುವ ಹೋರಾಟ ಗುರುವಾರವೂ ಮುಂದುವರಿಯಿತು.
ಸ್ಥಳಕ್ಕೆ ಆಗಮಿಸಿದ ಹುಕ್ಕೇರಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ ನೀಡಿದ ಆಶ್ವಾಸನೆಗೆ ಮಣಿಯದ ಗ್ರಾಮಸ್ಥರು ಸಮಸ್ಯೆಗೆ ತಕ್ಷಣ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದು ಹೋರಾಟ ಮುಂದುವರಿಸಿದರು.
ಅಽಕಾರಿಗಳು ಇಲ್ಲೇ ಬಂದು ಅಂತಿಮ ನಿರ್ಧಾರ ಪ್ರಕಟಿಸಬೇಕು. ಅಲ್ಲಿಯವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಬೋರಗಲ್ಲ ಗ್ರಾಪಂ ವಿಶೇಷ ಸಭೆಯಲ್ಲಿ ೨೦೨೩ರ ಡಿಸೆಂಬರ್ ೨೮ರಂದೇ ೬.೩೧ ಎಕರೆ ವಕ್ ಜಾಗವನ್ನು ವಿವಿಧ ಸಮುದಾಯಗಳ ಸ್ಮಶಾನಕ್ಕಾಗಿ ಹಂಚಿಕೆ ಮಾಡಲು ಠರಾವು ಪಾಸು ಮಾಡಲಾಗಿತ್ತು. ಲಿಂಗಾಯತ ಸಮುದಾಯಕ್ಕೆ ೨ ಎಕರೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ೧ ಎಕರೆ ಹಾಗೂ ಮುಸ್ಲಿಂ ಸಮುದಾಯಕ್ಕೆ ೩.೩೦ ಎಕರೆ ಜಾಗ ನೀಡಲು ಶಿಫಾರಸು ಮಾಡಲಾಗಿತ್ತು. ಆದರೆ, ರಾಜ್ಯ ವಕ್ ಮಂಡಳಿಯಿAದ ಅಂತಿಮ ಒಪ್ಪಿಗೆ ಸಿಗುವುದು ತಡವಾದ ಕಾರಣ ದಾಖಲಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.
ಬೇಡಿಕೆ ಈಡೇರುವವರೆಗೂ ಕದಲುವುದಿಲ್ಲ ಎಂದು ಮಹಿಳೆಯರು ಹಾಗೂ ಗ್ರಾಮಸ್ಥರು ಪಟ್ಟು ಹಿಡಿದರು. ಧರಣಿ ನಿರತ ಸ್ಥಳದಲ್ಲೇ ಒಲೆ ಹೂಡಿ ಅಡುಗೆ ಸಿದ್ಧಪಡಿಸಿ, ಊಟ ಮಾಡುವ ಮೂಲಕ ಆಡಳಿತಕ್ಕೆ ಬಿಸಿ ಮುಟ್ಟಿಸಿದರು. ಸೂಕ್ತ ನಿರ್ಧಾರ ಬರದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಗ್ರಾಮದ ಪ್ರಮುಖರು ಬೆಳಗಾವಿಯಲ್ಲಿ ಜಿಲ್ಲಾಽಕಾರಿ ಮೊಹಮ್ಮದ್ ರೋಷನ್ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸಿದ ಜಿಲ್ಲಾಽಕಾರಿ ಬರುವ ಮಂಗಳವಾರ ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಯುವ ಮುಖಂಡ ಗಿರೀಶ ಪಾಟೀಲ ತಿಳಿಸಿದರು.
ಪ್ರವೀಣ ಪಾಟೀಲ, ಶಿವಗೌಡ ಪಾಟೀಲ, ರಾಜು ಮಗದುಮ್ಮ, ಬಸವರಾಜ ಹುಣಶ್ಯಾಳಿ, ಬಸವರಾಜ ಗೌಡಾಡಿ, ಶಿವಪ್ಪ ಶರ್ಮಾ, ಭೀಮಪ್ಪ ಖಾತೇದಾರ, ಉಪ ತಹಸೀಲ್ದಾರ್ ಸಿ.ಎ.ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net