ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ಕುಸುಮ ಯೋಜನೆಯಡಿಯಲ್ಲಿ ಸೌರ ವಿದ್ಯುತ್ ಘಟಕ ಬರಲಿದೆ. ಅದಕ್ಕಾಗಿ ಸರ್ಕಾರದ 40 ಎಕರೆ ಜಮೀನನ್ನು 2024ರಲ್ಲೇ ಹೆಸ್ಕಾಂಗೆ ಹಸ್ತಾಂತರಿಸಿದ್ದೇವೆ. ಈಗ ಅದನ್ನು ಟೆಂಡರ್ ಮಾಡಿದ್ದು, ಗುತ್ತಿಗೆದಾರರು ಪ್ಯಾನಲ್ ಅಳವಡಿಸುವ ಪ್ರದೇಶವನ್ನು ಸ್ವಚ್ಛಗೊಳಿಸುವಾಗ ಗಿಡಮರಗಳನ್ನು ಕಟಾವು ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.