ಬೆಳಗಾವಿ: ಸ್ವ ಹಿತಾಸಕ್ತಿಯನ್ನು ಬದಿಗಿರಿಸಿ ಪರರ ಆರೋಗ್ಯದ ಕಾಳಜಿವಹಿಸುವ ದಾದಿಯರ ವೃತ್ತಿಯು ನಿಜಕ್ಕೂ ಪ್ರಶಂಸನೀಯ ಎಂದು ಬೆಳಗಾವಿ ಫೇರೊಕಾಸ್ಟ್ ನಿರ್ದೇಶಕ ಸಚಿನ ಸಬನಿಸ್ ಅಭಿಮತ ವ್ಯಕ್ತಪಡಿಸಿದರು.
ಇಲ್ಲಿನ ಯಳ್ಳೂರ ರಸ್ತೆಯ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಈಚೆಗೆ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ನರ್ಸ್ ಯಾವುದೇ ರೀತಿಯ ಸಂಬಂಧಗಳಿಲ್ಲದಿದ್ದರೂ, ಅಪರಿಚಿತ ರೋಗಿಯನ್ನು ತನ್ನ ಮಗುವಿನಂತೆಯೇ ಕಾಳಜಿಯಿಂದ ನೋಡಿಕೊಂಡು,ಆತನು ಆರೋಗ್ಯಹೊಂದಿ ಸಂತಸದ ಜೀವನ ನಡೆಸುವಂತೆ ಮಾಡುತ್ತಾರೆ ಎಂದು ಶ್ಲಾಸಿದರು.
ಯುಎಸ್ಎಮ್ ಕೆಎಲ್ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಮಾತನಾಡಿ, ಆಸ್ಪತ್ರೆಯ ಮೂಲ ಶಕ್ತಿಯೇ ದಾದಿಯರು. ಅವರು ರೋಗಿಗಳೊಂದಿಗೆ ಸದಾ ಮೃದುಭಾಷಿಯಾಗಿ, ಕರುಣೆಯಿಂದ, ಸಹಾನುಭೂತಿಯಿಂದ ವರ್ತಿಸಬೇಕು. ಅವರ ಮಾತುಗಳು ರೋಗಿಗಳಲ್ಲಿ ಆತ್ಮಸ್ಥೆ$ರ್ಯ ತುಂಬುವ ಶಕ್ತಿಯಾಗಿದೆ ಎಂದರು.
ಆಸ್ಪತ್ರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಎನ್. ಮಾತನಾಡಿ,ಆಸ್ಪತ್ರೆಯ ಸೇವಾ ವ್ಯವಸ್ಥೆಯಲ್ಲಿ ದಾದಿಯರ ಪಾತ್ರ ಅತ್ಯಂತ ಮಹತ್ವದಾಗಿದ್ದು, ದಿನದ 24 ಗಂಟೆಗಳ ಸೇವೆಯಲ್ಲಿ ನರ್ಸಸ್ಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದು, ಆರೋಗ್ಯ ಸೇವೆಯ ಬೆನ್ನೆಲುಬಾಗಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕರಾದ ಡಾ.ಸಂಜಯ ಕಂಬಾರ ಮಾತನಾಡಿ, ಆಸ್ಪತ್ರೆಯಲ್ಲಿ ನರ್ಸಿಂಗ್ ಸೇವೆ ಅತ್ಯಂತ ಪ್ರಮುಖ, ಜವಾಬ್ದಾರಿಯುತ ಹಾಗೂ ಸೂಕ್ಷ$್ಮ ಕರ್ತವ್ಯವಾಗಿದೆ ಎಂದು ಹೇಳಿದರು. ನರ್ಸಿಂಗ್ ಅಧೀಕ್ಷಕಿ ಶರೀಫಾ ಸಯ್ಯದ್, ಉಪ ಅಧೀಕ್ಷಕಿ ಭಾರತಿ ಲಿಂಗಾಯತ, ದಾಾಯಿಣಿ ಹಿರೆಮಠ ಇತರರಿದ್ದರು.