ಬೆಳಗಾವಿ: ತುರ್ತು ವೈದ್ಯಕಿಯ ವಿಭಾಗವು ಆಸ್ಪತ್ರೆ ಪ್ರಮುಖ ಆಧಾರಸ್ತಂಭವಾಗಿದೆ. ಅಪಘಾತಗಳು, ಹೃದಯಾಘಾತ, ಸ್ಟ್ರೊಕ್, ವಿಷಸೇವನೆ, ಗಂಭೀರ ಗಾಯಗಳು ಹಾಗೂ ಇತರ ಜೀವಾಪಾಯದ ಪರಿಸ್ಥಿತಿಗಳಲ್ಲಿ ರೋಗಿಯ ಜೀವ ಉಳಿಸುವ ಮೊದಲ ಜವಾಬ್ದಾರಿ ತುರ್ತು ವೈದ್ಯಕಿಯ ತಂಡದ ಮೇಲಿದೆ. ಇವರ ತ್ವರಿತ ನಿರ್ಧಾರ, ಪರಿಣತಿ ಹಾಗೂ ಮಾನವೀಯ ಸೇವೆ ಪ್ರತಿದಿನ ಅನೇಕ ಜೀವಗಳನ್ನು ಉಳಿಸುತ್ತಿದೆ ಎಂದು ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕಿಯ ಸಂಶೋಧನಾ ಕೇಂದ್ರದ ವೈದ್ಯಕಿಯ ಅಧೀಕ್ಷಕ ಡಾ.ಸಂಜಯ ಕಂಬಾರ ಹೇಳಿದರು.