ಬಣಜಿಗ ಸಮುದಾಯದ ಸೇವೆ ಸ್ಮರಣೀಯ

ಅಥಣಿ ಶೆಟ್ಟರಮಠದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು. ಮರುಳಸಿದ್ಧ ಸ್ವಾಮೀಜಿ, ಬಸವರಾಜ ಮಂಗಸೂಳಿ, ಸಿದ್ದಪ್ಪ ಮಹಾಜನ, ಅಕ್ಷಯ ಬುರ್ಲಿ, ಸಂಗಪ್ಪ ಉಣ್ಣಿ, ಪೂರ್ಣಿಮಾ ಪಾಂಗಿ ಇತರರಿದ್ದರು.
ಅಥಣಿ ಶೆಟ್ಟರಮಠದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು. ಮರುಳಸಿದ್ಧ ಸ್ವಾಮೀಜಿ, ಬಸವರಾಜ ಮಂಗಸೂಳಿ, ಸಿದ್ದಪ್ಪ ಮಹಾಜನ, ಅಕ್ಷಯ ಬುರ್ಲಿ, ಸಂಗಪ್ಪ ಉಣ್ಣಿ, ಪೂರ್ಣಿಮಾ ಪಾಂಗಿ ಇತರರಿದ್ದರು.
Published on
ಅಥಣಿ: ಹಿರಿಯರನ್ನು ಗೌರವಿಸುವಂತಹ ಕಾರ್ಯ ಬಣಜಿಗ ಸಮುದಾಯದಿಂದ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಸ್ಥಳೀಯ ಶೆಟ್ಟರಮಠದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಿರಿಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಾಡಿನ ಎಲ್ಲ ಮಠ, ಮಾನ್ಯಗಳಿಗೆ, ಶಿಕ್ಷಣ, ಆರೋಗ್ಯ, ಉದ್ಯಮ ಹೀಗೆ ಹತ್ತು ಹಲವು ರಂಗಗಳಲ್ಲಿ ಬಣಜಿಗ ಸಮುದಾಯದ ಸೇವೆ ಸ್ಮರಣೀಯವಾಗಿದೆ ಎಂದರು.
ಉಪನ್ಯಾಸಕಿ ಡಾ.ಭಾರತಿ ಬಿಜಾಪುರ ಮತ್ತು ಬಸವರಾಜ ಮಂಗಸೂಳಿ ಮಾತನಾಡಿದರು.
ಅಧ್ಯಕ್ಷ ಸಿದ್ದಪ್ಪ ಮಹಾಜನ, ಉಪಾಧ್ಯಕ್ಷ ಶಿವಕುಮಾರ ಮನಸಿ, ಕಾರ್ಯದರ್ಶಿ ಸಂಗಪ್ಪ ಉಣ್ಣಿ, ಸದಸ್ಯರಾದ ಮಹೇಶ ಚುನಮುರಿ, ಆನಂದ ಪಾಂಗಿ, ಸಂಪತ್ತ ಸೋಳಸಿ, ಸತೀಶ ಚುನಮುರಿ, ಮಹಾಂತೇಶ ಉಕ್ಕಲಿ, ಪೂರ್ಣಿಮಾ ಪಾಂಗಿ, ಐರಾವತಿ ಕೌಲಾಪುರ, ರಾಜಶ್ರೀ ಬುರ್ಲಿ, ಜಯಶ್ರೀ ಗುಡೋಡಗಿ, ಕವಿತಾ ಸಾವಡಕರ, ಅಕ್ಷತಾ ಮಹಾಜನ, ಶ್ರೀಶೈಲ ಚುನಮುರಿ, ಅಕ್ಷಯ ಬುರ್ಲಿ, ಪ್ರಫುಲ್ ಸೊಳಸಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net