ಕೋಣ ಬಿಡುವ ಕಾರ್ಯಕ್ರಮ ಅದ್ದೂರಿ

ಸಂಕೇಶ್ವರ ಮಹಾಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ಸಾಂಪ್ರದಾಯಿಕ ಕೋಣ ಬಿಡುವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಸಂಕೇಶ್ವರ ಮಹಾಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ಸಾಂಪ್ರದಾಯಿಕ ಕೋಣ ಬಿಡುವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
Published on
ಸಂಕೇಶ್ವರ: ಹನ್ನೊಂದು ವರ್ಷಗಳಿಗೊಮ್ಮೆ ಅದ್ದೂರಿಯಾಗಿ ಜರುಗುವ ಮಹಾಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ಸಾಂಪ್ರದಾಯಿಕ ‘ಕೋಣ ಬಿಡುವ’ ಕಾರ್ಯಕ್ರಮ ಅಂಗವಾಗಿ ಹಕ್ಕುದಾರ ಸಂತೋಷ ಹವಾಲ್ದಾರ್ ನಿವಾಸದಲ್ಲಿ ಕೋಣಕ್ಕೆ ವಿಶೇಷ ಪೂಜೆ ಸಲ್ಲಿಸಿ, ಎಣ್ಣೆ ಹಚ್ಚುವ ಸಂಪ್ರದಾಯ ಸಂಭ್ರಮದಿಂದ ಈಚೆಗೆ ಜರುಗಿತು.
ಬಳಿಕ ಬುಸಾರ ಲಕ್ಷ್ಮೀ ಮಂದಿರ, ಹಕ್ಕುದಾರರು ಹಾಗೂ ಖಾತೆದಾರ ಗೌಡರ ಮನೆ, ಶಂಕರಲಿಂಗ ದೇವಸ್ಥಾನ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಕೋಣವನ್ನು ಮೆರವಣಿಗೆಯೊಂದಿಗೆ ಕರೆತರಲಾಯಿತು.
ಜಾತ್ರೆ ಸೂತ್ರಧಾರ ದಿಲೀಪ ಅಸೂದೆ ಕೋಣಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಟ್ಟಾಭಿಷೇಕ ಸೇರಿದಂತೆ ಎಲ್ಲ ಧಾರ್ಮಿಕ ವಿಧಿ ಪೂರ್ಣಗೊಳಿಸಿ, ಸಂಪ್ರದಾಯದಂತೆ ಕೋಣ ಬಿಡಲಾಯಿತು.
ಜಾತ್ರಾ ಸಮಿತಿ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ, ಕಾರ್ಯಾಧ್ಯಕ್ಷ ಸುನೀಲ ಪರ್ವತರಾವ, ಉಪಾಧ್ಯಕ್ಷ ಅಮರ ನಲವಡೆ, ಕಾರ್ಯದರ್ಶಿ ಬಸನಗೌಡ ಪಾಟೀಲ, ಸಹಕಾರ್ಯದರ್ಶಿ ರಾವಸಾಹೇಬ ದೇಸಾಯಿ, ಹಕ್ಕುದಾರರಾದ ಕುನಾಲ ಪಾಟೀಲ, ನಿಕೇತ ಕುಲಕರ್ಣಿ, ಬಸವಣ್ಣೆಪ್ಪ ಕರ್ದೇಗೌಡ, ಗಿರೀಶ ಕುಲಕರ್ಣಿ, ಅಪ್ಪಾಸಾಹೇಬ ಶೆಟ್ಟಿಮನಿ, ಮುಖಂಡರಾದ ಶಿವಾನಂದ ಮುಡಶಿ, ಗಜಾನನ ಕ್ವಳ್ಳಿ, ಸಂಜಯ ಶಿರಕೋಳಿ, ಶ್ರೀಕಾಂತ ಹತನೂರಿ, ಅಮರ ನಲವಡೆ, ಶಂಕರರಾವ ಹೆಗಡೆ, ಅಜಿತ ಕರಜಗಿ, ರೋಹನ ನೇಸರಿ, ಆನಂದ ಸಂಸುದ್ದಿ, ಚಿದಾನಂದ ಕರದನ್ನವರ, ಕುಮಾರ ಬಸ್ತವಾಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net