

ಬೆಳಗಾವಿ: ಪ್ರತಿಯೊಬ್ಬರ ವ್ಯಕ್ತಿತ್ವ ರೂಪಿಸುವಲ್ಲಿ ಗುರುವಿನ ಪಾತ್ರ ಅನನ್ಯವಾಗಿದೆ. ಸರಿಯಾದ ದಾರಿ, ಗುರಿ ಹಾಗೂ ಬದುಕಿನ ಮೌಲ್ಯಗಳನ್ನು ಅರಿತುಕೊಳ್ಳಲು ಗುರುವಿನ ಮಾರ್ಗದರ್ಶನ ಅಗತ್ಯ ಎಂದು ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕಿ ಸುಶೀಲಾ ಗುರವ ಹೇಳಿದರು. ಫ.ಗು.ಹಳಕಟ್ಟಿ ಭವನದಲ್ಲಿ ಭಾನುವಾರ ಲಿಂಗಾಯತ ಸಂಘಟನೆ ಏರ್ಪಡಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಪಾತ್ರ ಪ್ರಮುಖವಾಗಿರುತ್ತದೆ. ಹೀಗಾಗಿ, ಸದಾ ಗುರು ಸ್ಮರಣೀಯರಾಗಿರುತ್ತಾರೆ ಎಂದರು. ಶಂಕರ ಗುಡಸ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಸತೀಶ ಪಾಟೀಲ ಗುರುವಿನ ಮಹತ್ವದ ಕುರಿತು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸೇವೆ ಸಲ್ಲಿಸಿದ ಶಿಕ್ಷಕರಾದ ಮಹಾಂತೇಶ ಮೆಣಸಿನಕಾಯಿ, ಮಹಾಂತೇಶ ತೋರಣಗಟ್ಟಿ, ಶಿವಾನಂದ ತಲ್ಲೂರ, ಅಶೋಕ ಉಳ್ಳೆಗಡ್ಡಿ, ಶ್ರೀದೇವಿ ನರಗುಂದ ಹಾಗೂ ಎಂ.ಎಸ್.ಸಾರಾಪುರಿ, ಬೆಳಗಾವಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷೆ ಸರಳಾ ಹೆರೇಕರರನ್ನು ಸನ್ಮಾನಿಸಲಾಯಿತು. ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಆನಂದ ಕರ್ಕಿ, ಬಸವರಾಜ ಬಿಜ್ಜರಗಿ, ಸುವರ್ಣಾ ಗುಡಸ, ಅಕ್ಕಮಹಾದೇವಿ ತೆಗ್ಗಿ, ಜೆ.ಬಿ.ಜವಣಿ, ಸುನೀಲ ಸಾಣಿಕೊಪ್ಪ, ನಂದಾ ಬಗಲಿ, ಸೋಮಶೇಖರ ವಾಲಿಇಟಗಿ, ಶಿವಾನಂದ ನಾಯಕ, ಬಾಬು ತಿಗಡಿ, ಲಕ್ಷ್ಮೀ ಜವಣಿ, ಸೋಮಶೇಖರ ಹೊಸಮನಿ, ಸಂಗಮ ಹಿರೇಮಠ, ಚನ್ನಪ್ಪ ನರಸನ್ನವರ ಇತರರಿದ್ದರು. ಮಹಾದೇವಿ ಅರಳಿ ವಚನ ಪ್ರಾರ್ಥನೆ ಮೂಲಕ ಸ್ವಾಗತಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.