ಪಿಆರ್‌ಒ ಕಾರ್ಯ ಶ್ಲಾಘನೀಯ

ಬೆಳಗಾವಿಯ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಜನಸಂಪರ್ಕ ದಿನಾಚರಣೆ ಅಂಗವಾಗಿ ಈಚೆಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು  ಡಾ.ಕರ್ನಲ್ ಎಂ. ದಯಾನಂದ ಉದ್ಘಾಟಿಸಿದರು. ಡಾ.ಮಾಧವ ಪ್ರಭು, ಎನ್. ಲೋಕೇಶ, ವೀರಾ ಭವಾನೆ ಇತರರಿದ್ದರು.
ಬೆಳಗಾವಿಯ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಜನಸಂಪರ್ಕ ದಿನಾಚರಣೆ ಅಂಗವಾಗಿ ಈಚೆಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಡಾ.ಕರ್ನಲ್ ಎಂ. ದಯಾನಂದ ಉದ್ಘಾಟಿಸಿದರು. ಡಾ.ಮಾಧವ ಪ್ರಭು, ಎನ್. ಲೋಕೇಶ, ವೀರಾ ಭವಾನೆ ಇತರರಿದ್ದರು.
Published on
ಬೆಳಗಾವಿ: ಆಸ್ಪತ್ರೆಗಳ ಬಗ್ಗೆ ಜನರಲ್ಲಿರುವ ನಕಾರಾತ್ಮಕ ಮನೋಭಾವ ಹೋಗಲಾಡಿಸಿ ಅರಿವು ಮೂಡಿಸುವ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಜನಸಂಪರ್ಕ ಅಧಿಕಾರಿಗಳು ಪ್ರಮುಖ ಪಾತ್ರವಹಿಸುತ್ತಾರೆ ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಕರ್ನಲ್ ಎಂ. ದಯಾನಂದ ಅಭಿಮತ ವ್ಯಕ್ತ ಪಡಿಸಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಜನಸಂಪರ್ಕ ದಿನಾಚರಣೆ ಅಂಗವಾಗಿ ಈಚೆಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ. ಆದರೆ, ಜನಸಂಪರ್ಕ ಅಧಿಕಾರಿಗಳು ಸದಾಕಾಲ ಲಭ್ಯರಿದ್ದು, ರೋಗಿ, ವೈದ್ಯರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಈ ನಿಟ್ಟಿನಲ್ಲಿ ಹಲವಾರು ನಿಯಮ, ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಸರ್ಕಾರದಿಂದ ಯಾವುದೇ ವಿಶೇಷ ಆರ್ಥಿಕ ಸಹಾಯ ಇಲ್ಲದಿದ್ದರೂ ನಮ್ಮಲ್ಲಿ ಗುಣಮಟ್ಟದ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಹಲವಾರು ಸಮಸ್ಯೆ, ಒತ್ತಡ, ಅಸಮಾಧಾನ, ಬೇಡಿಕೆ ಇರುತ್ತವೆ. ಆದರೆ, ಅವುಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಜನಸಂಪರ್ಕ ಅಧಿಕಾರಿಗಳು ನಿಸ್ಸೀಮರು ಎಂದು ಜನಸಂಪರ್ಕ ಅಧಿಕಾರಿಗಳ ಕಾರ್ಯ ಶ್ಲಾಘಿಸಿದರು. ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ.ಮಾಧವ ಪ್ರಭು ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳು ಭಯಭೀತರಾಗಿರುತ್ತಾರೆ. ಜನಸಂಪರ್ಕ ಅಧಿಕಾರಿಗಳು ಸ್ನೇಹಪರರಾಗಿದ್ದು, ರೋಗಿಗಳಿಗೆ ಧೈರ್ಯ ನೀಡಿ ಸಾಂತ್ವನ ಹೇಳುವ ಕಾರ್ಯ ಅದ್ಭುತವಾಗಿದೆ. ವೈದ್ಯರು ಮಾತ್ರ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ. ರೋಗಿಗಳನ್ನು ಸಮಾಧಾನಪಡಿಸಿ, ಅವರಲ್ಲಿ ನಂಬಿಕೆ ವೃದ್ಧಿಸುವುದರಲ್ಲಿ ಜನಸಂಪರ್ಕ ಅಧಿಕಾರಿಗಳು ಪ್ರಮುಖ
ಪಾತ್ರವಹಿಸುತ್ತಾರೆ ಎಂದರು.
ಆಸ್ಪತ್ರೆ ಸಹಾಯಕ ಪ್ರಧಾನ ವ್ಯವಸ್ಥಾಪಕ ಎನ್. ಲೋಕೇಶ ಮಾತನಾಡಿ, ಸಂಸ್ಥೆಗಳು ಮತ್ತು ಜನಸಾಮಾನ್ಯರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿ, ವಿಶ್ವಾಸ ಮತ್ತು ಸಕಾರಾತ್ಮಕ ಬದಲಾವಣೆ ತರಲು ಸಹಾಯ ಮಾಡುವ ಕಾರ್ಯದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತೊಡಗಿದ್ದಾರೆ ಎಂದರು.
ಆಡಳಿತಾಧಿಕಾರಿ ಡಾ.ರಾಜಶೇಖರ ಸೋಮನಟ್ಟಿ, ಡಾ.ಬಸವರಾಜ ಬಿಜ್ಜರಗಿ, ಹಿರಿಯ ಜನಸಂರ್ಕ ಅಧಿಕಾರಿ ವೀರಾ ಭವಾನೆ, ವಿನೋದ ದೇಶನೂರ, ಶಿವಾನಂದ ಖಾನಾಪುರ, ಸುನೀಲ ಶಿಂಧೆ
ಇತರರಿದ್ದರು. ಪಿಆರ್‌ಒ ಬಸವರಾಜ ಸೊಂಟನವರ ಸ್ವಾಗತಿಸಿ, ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net