ಪಂಢರಪುರ ಪಾದಯಾತ್ರಿಗಳು ಪುಣ್ಯವಂತರು

ನಾಗರಮುನ್ನೋಳಿ ಗ್ರಾಮದಲ್ಲಿ ದಿಂಡಿ ಪಾದಯಾತ್ರೆ ರಜತೋತ್ಸವಕ್ಕೆ ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ ಚಾಲನೆ ನೀಡಿದರು. ಚಿಂಚಣಿ ಮಠದ ಉತ್ತರಾಧಿಕಾರಿ ಶಿವಪ್ರಸಾದ ದೇವರು, ಕವಲಗುಡ್ಡದ ಅಮರೇಶ್ವರ ಮಹಾರಾಜರು, ಕಬ್ಬೂರಿನ ಗೌರಿಶಂಕರ ಮಠದ ರೇವಣಸಿದ್ಧ ಸ್ವಾಮಿಜಿ, ಡಾ.ಎಂ.ಬಿ.ಕುಂಬಾರ, ರಾಜು ಕುಂಬಾರ, ಸಿದ್ದಪ್ಪ ರ‍್ಯಾಯಿ ಉಪಸ್ಥಿತರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕೌಲಗುಡ್ಡದ ಅಮರೇಶ್ವರ ಮಹಾರಾಜರ ಅಭಿನುಡಿ
  • ದಿಂಡಿಯಾತ್ರೆ ರಜತೋತ್ಸವಕ್ಕೆ ಚಾಲನೆ
  • ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ
ನಾಗರಮುನ್ನೋಳಿ: ಧಾರ್ಮಿಕ ಕಾರ್ಯಗಳು ಮನಸ್ಸಿಗೆ ನೆಮ್ಮದಿ ಹೆಚ್ಚಿಸುತ್ತವೆ ಎಂದು ಕೌಲಗುಡ್ಡದ ಅಮರೇಶ್ವರ ಮಹಾರಾಜರು ಹೇಳಿದರು.
ಗ್ರಾಮದ ವಿಠ್ಠಲ ಮಂದಿರದಲ್ಲಿ ದಿಂಡಿ ಪಾದಯಾತ್ರೆ ರಜತೋತ್ಸವಕ್ಕೆ ಈಚೆಗೆ ಚಾಲನೆ ನೀಡಿ ಮಾತನಾಡಿ, ಪಂಢರಪುರಕ್ಕೆ ಪಾದಯಾತ್ರೆ ಕೈಗೊಳ್ಳುವ ಭಕ್ತರು ಪುಣ್ಯವಂತರು.ಜೀವನದ ಕಷ್ಟಕಾಲದಲ್ಲಿ ವಿಠ್ಠಲ-ರುಕ್ಮಿಣಿ ಭಕ್ತರ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದರು.
ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಪಂಢರಪುರಕ್ಕೆ ದಿನವೂ ಭೇಟಿ ನೀಡುತ್ತಿದ್ದ ಲಕ್ಷಾಂತರ ಭಕ್ತರಿಗೆ ಅಹಲ್ಯಾಬಾಯಿ ರೊಟ್ಟಿ-ಜುನಕದ ಪ್ರಸಾದ ನೀಡುತ್ತಿದ್ದರು. ಇಂದು ಮಹಾರಾಷ್ಟ್ರದ ಜನಪ್ರಿಯ ಆಹಾರವಾಗಿದೆ ಎಂದು ಹೇಳಿದರು.
ಕಬ್ಬೂರಿನ ಗೌರಿ ಶಂಕರ ಮಠದ ರೇವಣಸಿದ್ಧ ಸ್ವಾಮೀಜಿ, ಆರ್‌ಎಸ್‌ಎಸ್ ಮುಖಂಡ ವಿಠ್ಠಲಜೀ ಮಾತನಾಡಿದರು
ಡಾ.ಎಂ.ಬಿ.ಕುಂಬಾರ, ಸಿದ್ದಪ್ಪ ರ‍್ಯಾಯಿ, ಶಿವಪುತ್ರ ಮನಗೂಳಿ, ವಿ.ಬಿ.ಈಟಿ, ಡಾ.ಜ್ಞಾನೇಶ್ವರ ಕುಂಬಾರ, ಆರ್.ಕೆ.ಭಾಗಿ, ಮಹಾದೇವ ಚೌಗಲಾ, ಬಾಬು ಕಾಳನ್ನವರ, ಲಕ್ಷ್ಮಿಸಾಗರ ಈಟಿ, ಶಿವಾನಂದ ರ‍್ಯಾಯಿ, ಕಲಾವತಿ ಕುಂಬಾರ, ಅನಸೂಯಾ ಕುಂಬಾರ, ಬಸವಣ್ಣಿ ಕುಂಬಾರ, ಡಾ.ಉಮೇಶ ಕುಂಬಾರ, ಮಾರುತಿ ರ‍್ಯಾಯಿ, ಡಾ.ಅರುಣ ರ‍್ಯಾಯಿ, ಎಂ.ಎಸ್.ಈಟಿ, ಗೋಪಾಲ ಕುಂಬಾರ, ಪ್ರಕಾಶ ಕುಂಬಾರ, ಬಸವರಾಜ ಕುಂಬಾರ, ಶರಾವತಿ ಕುಂಬಾರ, ರಾಘವೇಂದ್ರ ಬಡಿಗೇರ ಉಪಸ್ಥಿತರಿದ್ದರು. ರಾಜು ಕುಂಬಾರ ಸ್ವಾಗತಿಸಿ, ಚಂದ್ರಶೇಖರ ಅರಭಾವಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net