ಜೀವ ಉಳಿಸುವ ಕಾರ್ಯ ಪ್ರಶಂಸಾರ್ಹ

ಮಲ್ಲಮ್ಮನ ಬೆಳವಡಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನದ ಕಾರ್ಯಕ್ರಮವನ್ನು ವೈದ್ಯರು ಉದ್ಘಾಟಿಸಿದರು. ಡಾ.ಚಂದ್ರಶೇಖರ ರೊಟಯ್ಯನವರಮಠ, ಡಾ.ಎ.ಬಿ.ಪಾಟೀಲ, ಡಾ.ಮಂಗಳಾದೇವಿ ಪಾಟೀಲ, ಡಾ.ಸಿದ್ಧಾರೂಢ ಹುಲ್ಲೂರ, ಇತರರಿದ್ದರು.
ಮಲ್ಲಮ್ಮನ ಬೆಳವಡಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನದ ಕಾರ್ಯಕ್ರಮವನ್ನು ವೈದ್ಯರು ಉದ್ಘಾಟಿಸಿದರು. ಡಾ.ಚಂದ್ರಶೇಖರ ರೊಟಯ್ಯನವರಮಠ, ಡಾ.ಎ.ಬಿ.ಪಾಟೀಲ, ಡಾ.ಮಂಗಳಾದೇವಿ ಪಾಟೀಲ, ಡಾ.ಸಿದ್ಧಾರೂಢ ಹುಲ್ಲೂರ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಚಂದ್ರಶೇಖರ ಶ್ಲಾಘನೆ
  • ಮಲ್ಲಮ್ಮನ ಬೆಳವಡಿಯಲ್ಲಿ ಆಚರಣೆ
ಮಲ್ಲಮ್ಮನ ಬೆಳವಡಿ: ‘ವೈದ್ಯೋ ನಾರಾಯಣೋ ಹರಿ’ ಎಂಬಂತೆ ರೋಗಿಗಳ ಪಾಲಿಗೆ ವೈದ್ಯರು ಜೀವ ಉಳಿಸುವ ದೇವರಿದ್ದಂತೆ. ವೈದ್ಯರ ಸಾಮಾಜಿಕ ಕೊಡುಗೆ ಅಪಾರವಾಗಿದ್ದು, ಪ್ರತಿ ವೈದ್ಯರ ಸೇವೆ ಸ್ಮರಿಸುವ ಜು.1 ಮಹತ್ವದ ದಿನವಾಗಿದೆ ಎಂದು ಜೀವನಾಡಿ ವೈದ್ಯರ ಸಂಘದ ಅಧ್ಯಕ್ಷ ಡಾ.ಚಂದ್ರಶೇಖರ ರೊಟಯ್ಯನವರಮಠ ಹೇಳಿದರು.
ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಆದರ್ಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಎ.ಬಿ.ಪಾಟೀಲ ಮಾತನಾಡಿ, ಕೋವಿಡ್‌ಸಂದಿಗ್ಧ ಸಮಯದಲ್ಲಿ ಜೀವದ ಹಂಗು ತೊರೆದು ಸಾವಿರಾರು ರೋಗಿಗಳ ಜೀವ ಉಳಿಸಿದ ವೈದ್ಯರ ನಿಸ್ವಾರ್ಥ ಸೇವೆ ಸ್ಮರಣೀಯ ಎಂದು ತಿಳಿಸಿದರು.
ದಿ.ಡಾ.ಬಿಧನ್ ಚಂದ್ರ ರಾಯ್ ಜನ್ಮದಿನದ ಅಂಗವಾಗಿ ಆಚರಿಸಲಾಗುವ ವೈದ್ಯರ ದಿನದ ನಿಮಿತ್ತ ಕೇಕ್ ಕತ್ತರಿಸಲಾಯಿತು. ಪ್ರಾಚಾರ್ಯೆ ಡಾ.ಮಂಗಳಾದೇವಿ ಪಾಟೀಲ ಅವರು, ನಿತ್ಯ ವಿಜಯವಾಣಿಯ ‘ವಿದ್ಯಾರ್ಥಿ ಉದ್ಯೋಗ ಮಿತ್ರ’ ಪ್ರತಿಗಳನ್ನು ಶೈಕ್ಷಣಿಕ ವರ್ಷಪೂರ್ತಿ ಬಡ ಮಕ್ಕಳಿಗೆ ನೀಡುವುದಾಗಿ ವಾಗ್ದಾನ ಮಾಡಿದರು.
ಡಾ.ಸಿದ್ಧಾರೂಢ ಹುಲ್ಲೂರ, ಡಾ.ಸುಧೀರ ದಾಸ್ಯಾಳ, ಡಾ.ಶ್ರೀಧರ ಮೊಖಾಸಿ, ಡಾ.ನಾಗರಾಜ ಕರಿಕಟ್ಟಿ, ಡಾ.ಮಂಜುನಾಥ ಹಿರೇಮಠ ಇತರರಿದ್ದರು. ಶಿಕ್ಷಕಿ ವಿದ್ಯಾ ಪಾಟೀಲ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net