ಸಂಭ್ರಮದ ಮಾರುತಿ ದೇವರ ಓಕುಳಿ

ಮಮದಾಪುರ ಗ್ರಾಮದಲ್ಲಿ ಶ್ರೀ ಮಾರುತಿ ದೇವರ ಓಕುಳಿ ಸಹಸ್ರಾರು ಭಕ್ತರ ಸಮೂಹದಲ್ಲಿ  ಭಾನುವಾರ ನೆರವೇರಿತು.
ಮಮದಾಪುರ ಗ್ರಾಮದಲ್ಲಿ ಶ್ರೀ ಮಾರುತಿ ದೇವರ ಓಕುಳಿ ಸಹಸ್ರಾರು ಭಕ್ತರ ಸಮೂಹದಲ್ಲಿ ಭಾನುವಾರ ನೆರವೇರಿತು.
Published on
ಮಮದಾಪುರ:
ಭಾನುವಾರ ಬೆಳಗ್ಗೆ 6ಕ್ಕೆ ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಅಲಂಕಾರ ನೆರವೇರಿತು. ಬೆಳಗ್ಗೆ 8ಗಂಟೆಯಿಂದ ಭಕ್ತಾದಿಗಳು ನೈವೇದ್ಯ ಅರ್ಪಿಸಿ ದೇವರಲ್ಲಿ ಪ್ರಾರ್ಥಿಸಿದರು.
ಸಂಜೆ 4ಕ್ಕೆ ಬೀರಸಿದ್ಧೇಶ್ವರ ದೇವಸ್ಥಾನದಿಂದ ಮಾರುತಿ ದೇವರ ಮಂದಿರದವರೆಗೆ ರಾಮದುರ್ಗದ ಬನಶಂಕರಿ ಗಾರುಡ ಗೊಂಬೆ ಕುಣಿತ ನೋಡುಗರ ಗಮನ ಸೆಳೆಯಿತು. ಬಳಿಕ ಮಾರುತಿ ದೇವರ ಪಲ್ಲಕ್ಕಿ ಉತ್ಸವ ಜರುಗಿತು.
ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಅರ್ಚಕರಾದ ಮಹಾದೇವ ಪೂಜೇರಿ, ಶಂಕರ ಪೂಜೇರಿ, ಹಿರಿಯರಾದ ಶಂಕರ ಭೋಸಲೆ, ಅಜ್ಜಪ್ಪ ಗಾಣಗಿ, ಬಸಪ್ಪ ನಡಳ್ಳಿ, ದುಂಡಪ್ಪ ಸಿದ್ನಾಳ, ಮಹಾಂತೇಶ ಜನ್ಮಟ್ಟಿ, ಮಾರುತಿ ಬಾಗನ್ನವರ, ಸಿ.ಸಿ.ಕೊಣ್ಣೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net