ಗಾಯಾಳು ಮಹಿಳೆ ಸಾವು

ಭಾನುವಾರ ಸಂಭವಿಸಿದ್ದ ಅಪಘಾತವೊಂದರ ದೃಶ್ಯ.
ಭಾನುವಾರ ಸಂಭವಿಸಿದ್ದ ಅಪಘಾತವೊಂದರ ದೃಶ್ಯ.
Published on
ಬೆಳಗಾವಿ: ಕಾಂಗ್ರೆಸ್ ರಸ್ತೆ ಮರಾಠಾ ಕಾಲನಿ ಕ್ರಾಸ್ ಬಳಿ ರಸ್ತೆ ತಡೆಯಿಂದ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಶಿವಾಜಿ ನಗರದ ಸರೀತಾ ಕಾಲಕುಂದ್ರಿಕರ(64) ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮೃತಪಟ್ಟಿದ್ದಾರೆ.
ರೋಡ್ ಬ್ರೇಕರ್‌ನಿಂದ ನಿತ್ಯವೂ ಅನೇಕ ಬೈಕ್ ಸವಾರರು ನಿಯಂತ್ರಣ ತಪ್ಪಿ ಬೀಳುತ್ತಿದ್ದು, ಈಚೆಗೆ ದೊಡ್ಡದಾಗಿ ಹಾಕಿರುವ ಈ ತಡೆಗೆ ಯಾವುದೇ ಬಣ್ಣದ ಗುರುತು, ರಿಪ್ಲೆಕ್ಟರ್ ಇಲ್ಲ. ಹಗಲು ಹೊತ್ತಿನಲ್ಲೂ ಮರದ ನೆರಳಿನಿಂದ ಕಾಣುತ್ತಿಲ್ಲ. ಇದರಿಂದ ವೇಗವಾಗಿ ಬರುವ ಬೈಕ್ ಸವಾರರು ಪುಟಿದು ಬೀಳುತ್ತಿದ್ದಾರೆ.
ಭಾನುವಾರ ಒಂದೇ ದಿನ ಈ ಸ್ಥಳದಲ್ಲಿ ಇನ್ನಿಬ್ಬರು ಯುವಕರು ಪ್ರತ್ಯೇಕ ಅಪಘಾತದಲ್ಲಿ ಬಿದ್ದು ಕೈ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಅವತ್ತು ಮಧ್ಯಾಹ್ನ ಶಿವಾಜಿ ನಗರದಿಂದ ಟಿಳಕವಾಡಿಗೆ ಬೈಕ್ ಹಿಂಬದಿ ಕುಳಿತು ಹೊರಟಿದ್ದಾಗ, ರಸ್ತೆ ತಡೆಯಿಂದಾಗಿ ಪುಟಿದು ಬಿದ್ದ ಸರೀತಾ ತಲೆಗೆ ತೀವ ಪೆಟ್ಟಾಗಿತ್ತು. ನಿತ್ಯವೂ ಅಪಘಾತಗಳಾಗುತ್ತಿದ್ದು, ರಿಪ್ಲೆಕ್ಟರ್ ಅಳವಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net