ಸದಾಶಯ ಸಾರಿದ ಇಂಚಗೇರಿ ಸಂಪ್ರದಾಯ

ಮಮದಾಪುರದಲ್ಲಿ ಹಮ್ಮಿಕೊಂಡಿದ್ದ ಮಾಧವಾನಂದ ಪ್ರಭೂಜಿ ಆಶ್ರಮ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರೇವಣಸಿದ್ಧೇಶ್ವರ ಮಹಾರಾಜರು ಆಶೀರ್ವಚನ ನೀಡಿದರು. ಮೌನ ಮಲ್ಲಿಕಾರ್ಜುನ ಶಿವಯೋಗಿಗಳು, ಸುರೇಶ ಸನದಿ ಇತರರಿದ್ದರು.
ಮಮದಾಪುರದಲ್ಲಿ ಹಮ್ಮಿಕೊಂಡಿದ್ದ ಮಾಧವಾನಂದ ಪ್ರಭೂಜಿ ಆಶ್ರಮ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರೇವಣಸಿದ್ಧೇಶ್ವರ ಮಹಾರಾಜರು ಆಶೀರ್ವಚನ ನೀಡಿದರು. ಮೌನ ಮಲ್ಲಿಕಾರ್ಜುನ ಶಿವಯೋಗಿಗಳು, ಸುರೇಶ ಸನದಿ ಇತರರಿದ್ದರು.
Published on
ಗ್ರಾಮದ ಗುಂಡ ಬಸವೇಶ್ವರ ಕ್ರಾಸ್ ಬಳಿ ಸೋಮವಾರ ಹಮ್ಮಿಕೊಂಡಿದ್ದ  ಶ್ರೀ ಮಾಧವಾನಂದ ಪ್ರಭೂಜಿ ಆಶ್ರಮ ಲೋಕಾರ್ಪಣೆ ಹಾಗೂ ಪ್ರಾಣಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಎಲ್ಲ ಜನಾಂಗ ಒಗ್ಗೂಡಿಸಿ ಪ್ರತಿ ಗ್ರಾಮದಲ್ಲೂ ಸತ್ಸಂಗ, ಸಪ್ತಾಹ ಕಾರ್ಯಕ್ರಮ ಆಯೋಜಿಸಿ ಸಮಾಜದಲ್ಲಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಭಾವನೆ ಬೆಳೆಸುವ ಕಾರ್ಯ ಮಹತ್ವದ್ದಾಗಿದೆ ಎಂದರು. ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವುದು ಅಗತ್ಯವಾಗಿದೆ. ಮಹಾತ್ಮರ ಜೀವನಾಧರಿತ ಪ್ರವಚನ ಆಯೋಜಿಸಿ ಸಾಮಾಜಿಕ ಜಾಗೃತಿ ಮೂಡಿಸಬೇಕು ಎಂದರು.
ಬೆಳಗ್ಗೆ ಆಯೋಜಿಸಿದ್ದ ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜರು, ಮಾಧವಾನಂದ ಪ್ರಭೂಜಿ ಆಶ್ರಮ ಹಾಗೂ ಮಾಧವಾನಂದ ಪ್ರಭೂಜಿ ಅವರ ಪ್ರಾಣಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಇಂಚಗೇರಿ ಸಂಪ್ರದಾಯ ಹಿರಿಯ ಸದ್ಭಕ್ತರನ್ನು ಗೌರವಿಸಲಾಯಿತು. ಸ್ಥಳೀಯ ಮೌನ ಮಲ್ಲಿಕಾರ್ಜುನ ಶಿವಯೋಗಿಗಳು, ಗ್ರಾಪಂ ಸದಸ್ಯರಾದ ಸುರೇಶ ಸನದಿ,ಕೆಂಪಣ್ಣ ಮೈಲನ್ನವರ ಹಾಗೂ ಶಂಕರ ಮಹಾರಾಜರು,
ರಾಮಣ್ಣ ಮಹಾರಾಜರು, ಕೆಂಚಪ್ಪ ಮಹಾರಾಜರು, ವಸಂತ ಮಹಾರಾಜರು, ಸದಾಶಿವ ಮಹಾರಾಜರು, ಶೆಟ್ಟೆಪ್ಪ ಮಹಾರಾಜರು, ರೇವಪ್ಪ ಎಮ್ಮಿ, ಹನುಮಂತ ಎಮ್ಮಿ, ಬಸವರಾಜ ಎಮ್ಮಿ, ಮಾರುತಿ ಭಜಂತ್ರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net