ಹೋಮಿಯೋಪಥಿಕ್ ಜಿಲ್ಲಾ ಒಕ್ಕೂಟ ಪದಗ್ರಹಣ ನಾಡಿದ್ದು

ಡಾ.ವಿ.ವಿ.ವೆರ್ಣೇಕರ ಅಧ್ಯಕ್ಷ, ಡಾ.ಸೋನಾಲಿ ಸರ್ನೋಬತ್ ಕಾರ್ಯಾಧ್ಯಕ್ಷೆ
ಡಾ.ವಿ.ವಿ.ವೆರ್ಣೇಕರ ಅಧ್ಯಕ್ಷ, ಡಾ.ಸೋನಾಲಿ ಸರ್ನೋಬತ್ ಕಾರ್ಯಾಧ್ಯಕ್ಷೆ
Published on
ಬೆಳಗಾವಿ: ಕರ್ನಾಟಕ ಹೋಮಿಯೋಪಥಿಕ್ ಮೆಡಿಕಲ್ ಅಸೋಸಿಯೇಷನ್ ಬೆಳಗಾವಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮೇ 31ರಂದು ಬೆಳಗ್ಗೆ 10ಕ್ಕೆ ನಗರದ ಗಾಂಧಿ ಭವನದಲ್ಲಿ ಆಯೋಜಿಸಲಾಗಿದೆ.
ಡಾ.ವಿ.ವಿ.ವೆರ್ಣೇಕರ ಅಧ್ಯಕ್ಷ, ಡಾ.ಸೋನಾಲಿ ಸರ್ನೋಬತ್ ಕಾರ್ಯಾಧ್ಯಕ್ಷೆ, ಡಾ.ಶ್ರೇಯಸ್ ಜಿನರಾಳ್ಕರ್ ಕಾರ್ಯ ದರ್ಶಿ, ಡಾ.ಸಂತೋಷ ಮಗದುಮ್ಮ ಸಂಘಟನಾ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವರು. ಹೊಸ ಕಾರ್ಯಕಾರಿ ಸಮಿತಿ, ಸಂಘಟನಾ ಸಮಿತಿಯ ಸದಸ್ಯರ ಪರಿಚಯವೂ ಜರುಗಲಿದೆ.
ನಂತರ ವಿಶ್ವ ಹೊಮಿಯೋಪಥಿ ದಿನಾಚರಣೆ ಪ್ರಯುಕ್ತ ಆಯೋಜಿಸಿ ರುವ ವಿಶೇಷ ವೈಜ್ಞಾನಿಕ ಸಮ್ಮೇಳನ ವನ್ನು ಕರ್ನಾಟಕ ಹೋಮಿಯೋ ಪಥಿಕ್ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ವೀರಬ್ರಹ್ಮಾಚಾರ್ಯ ಉದ್ಘಾಟಿಸುವರು. ಉಪಾಧ್ಯಕ್ಷ ಡಾ.ಜಯಂತ ಎ.ಬಿ., ಆಯುಷ್ ಫೆಡರೇಷನ್ ಆಫ್ ಇಂಡಿಯಾ ಕರ್ನಾಟಕ ಶಾಖೆ ಉಪಾಧ್ಯಕ್ಷ ಡಾ.ಶ್ರೀಕಾಂತ ಕೊಂಕಣಿ, ಕೆಎಲ್‌ಇ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜಿನ ಆಡಳಿತ ವಿಭಾಗದ ನಿರ್ದೇಶಕ ಡಾ.ಎಂ.ಎ.ಉಡಚನಕರ ಪಾಲ್ಗೊಳ್ಳುವರು.
ಕೊಲ್ಲಾಪುರದ ಎಸ್‌ಜೆಪಿಇಎಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಡಾ.ಸಂತೋಷ ರಾನಡೆ ‘ಕ್ಲಾಸಿಕಲ್ ಹೋಮಿಯೋಪಥಿ ಚಿಕಿತ್ಸೆಯಲ್ಲಿ ಆಧುನಿಕ ಡಯಾಗ್ನೋಸ್ಟಿಕ್ ಉಪಕರಣಗಳ ಬಳಕೆ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಹಾರಾಷ್ಟ್ರ ರಾಜ್ಯದ ಗಡಹಿಂಗ್ಲಜ್ನ ಡಾ.ನರೇಂದ್ರ ಪಾಟೀಲ ‘ಗಂಭೀರ ರೋಗ ಪ್ರಕರಣಗಳು ಮತ್ತು ಹೋಮಿಯೋಪಥಿ ಮೂಲಕ ಅವುಗಳ ನಿರ್ವಹಣೆ’, ಎ.ಎಂ.ಶೇಖ್ ಹೋಮಿಯೋಪಥಿಕ್ ಕಾಲೇಜಿನ ಡಾ.ಕಿರಣ ಪಾಟೀಲ ‘ಹೋಮಿಯೋಪಥಿ ವೈದ್ಯರ ನೈತಿಕತೆ ಮತ್ತು ವೃತ್ತಿಪರ ಜವಾಬ್ದಾರಿ’ ಕುರಿತು ಮಾತನಾಡಲಿದ್ದಾರೆ
ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net