ಇಲ್ಲಿನ ಎಪಿಎಂಸಿಯಿಂದ ನಿತ್ಯ ಸರಾಸರಿ ಗೋವಾ ಮತ್ತು ಮಹಾರಾಷ್ಟ್ರದ ರತ್ನಾಗಿರಿ, ಕರಾವಳಿ ಭಾಗದ ವಿವಿಧ ನಗರಗಳಿಗೆ ನೂರಕ್ಕೂ ಹೆಚ್ಚು ಲಾರಿಗಳಷ್ಟು ವಿವಿಧ ತರಕಾರಿ ರಫ್ತಾಗುತ್ತಿತ್ತು. ಆದರೆ ಪ್ರಸ್ತುತ ಹೋಟೆಲ್‌ಗಳಲ್ಲಿ ಮೆನು ಕಡಿತಗೊಳಿಸಿರುವುದರಿಂದ ಬೇಡಿಕೆ ಇಲ್ಲದೆ ಕೇವಲ 30-40 ಟ್ರಕ್‌ಗಳಷ್ಟು ಮಾತ್ರ ರಫ್ತಾಗುತ್ತಿದೆ. ಹೀಗಾಗಿ ಸಾಕಷ್ಟು ತರಕಾರಿಗಳು ಎಪಿಎಂಸಿಯಲ್ಲಿಯೇ ಉಳಿಯುವಂತಾಗಿದ್ದು, ದರವೂ ಕುಸಿಯುತ್ತಿದೆ.