ಪೌರ ಕಾರ್ಮಿಕರ ಶ್ರಮದಾನ ಸ್ಮರಣೀಯ

ಬೈಲಹೊಂಗಲ ನಗರಸಭೆಯಲ್ಲಿ ಪೌರಕಾರ್ಮಿಕರಿಗೆ, ಚಿಂದಿ ಆಯುವವರಿಗೆ ಸುರಕ್ಷತಾ ಕಿಟ್ ವಿತರಿಸಲಾಯಿತು. ಶಾಸಕ ಮಹಾಂತೇಶ ಕೌಜಲಗಿ, ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ಆರ್.ಎಸ್.ಹಿಟ್ಟಣಗಿ ಇತರರಿದ್ದರು.
ಬೈಲಹೊಂಗಲ ನಗರಸಭೆಯಲ್ಲಿ ಪೌರಕಾರ್ಮಿಕರಿಗೆ, ಚಿಂದಿ ಆಯುವವರಿಗೆ ಸುರಕ್ಷತಾ ಕಿಟ್ ವಿತರಿಸಲಾಯಿತು. ಶಾಸಕ ಮಹಾಂತೇಶ ಕೌಜಲಗಿ, ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ಆರ್.ಎಸ್.ಹಿಟ್ಟಣಗಿ ಇತರರಿದ್ದರು.
Published on
ಬೈಲಹೊಂಗಲ: ನಗರದ ಅಂದ, ನಾಗರಿಕರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಶ್ರಮದಾನ ಸ್ಮರಣೀಯ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ನಗರಸಭೆಯಲ್ಲಿ ವಿವಿಧ ಯೋಜನೆಯಡಿ ಲಾನುಭವಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಗ್ರಿ ವಿತರಣೆ ಕಾರ್ಯಕ್ರಮ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮ-2026ರ ತರಬೇತಿ ಕಾರ್ಯಾಕ್ರಮದಲ್ಲಿ ಸಾಮಗ್ರಿ ವಿತರಿಸಿ ಮಾತನಾಡಿ, ನಗರೋತ್ಥಾನ ಯೋಜನೆಯಲ್ಲಿ ಪೌರಕಾರ್ಮಿಕರಿಗೆ, ನಮಸ್ತೆ ಯೋಜನೆಯಡಿ ಚಿಂದಿ ಆಯುವವರಿಗೆ ಸುರಕ್ಷತಾ ಕಿಟ್ ವಿತರಣೆ ಹಾಗೂ ಶೇ.5ರ ನಿಧಿಯಡಿ ಅಂಗವಿಕಲ ಲಾನುಭವಿಗಳಿಗೆ ತ್ರಿ ಚಕ್ರ ಸೈಕಲ್ ಮತ್ತು ವೀಲ್‌ಚೇರ್ ವಿತರಣೆ ಮೂಲಕ ನಗರಸಭೆಯಿಂದ ಅವರ ಹಿತ ಕಾಪಾಡಲಾಗುತ್ತಿದೆ. ಪೌರಕಾರ್ಮಿಕರ ಕಾರ್ಯಕ್ಕೆ ಗೌರವ ನೀಡುತ್ತ ಸಹಕರಿಸಬೇಕು. ಅಂಗವಿಕಲರು ನಮ್ಮಂತೆ ಜೀವಿಸಲು ಸಹಕಾರ ನೀಡಬೇಕು ಎಂದರು.
ನಗರಸಭೆಯ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ ಮಾತನಾಡಿ. ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮ-2026 ಕುರಿತು ಪೌರಕಾರ್ಮಿಕರು ಮತ್ತು ಚಿಂದಿ ಆಯುವವರಿಗೆ ತ್ಯಾಜ್ಯ ಸಂಗ್ರಹಣೆ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮತ್ತು ವೈಯಕ್ತಿಕ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು.
ಕಚೇರಿ ವ್ಯವಸ್ಥಾಪಕ ಎಂ.ಐ.ಕುಟ್ರಿ, ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಸ್.ಹಿಟ್ಟಣಗಿ, ಹಿರಿಯ ಗುಮಾಸ್ತ ಬಿ.ಐ.ಗುಡಿಮನಿ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ.ಧಾರವಾಡಕರ, ಡೇ ನಲ್ಮ ವಿಭಾಗದ ಸಿ.ಆರ್.ಪಿ., ಪೌರಕಾರ್ಮಿಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net