ಸಹಕಾರ ಸಂಘಗಳಿಂದ ರೈತರು, ಗ್ರಾಮಗಳ ಅಭಿವೃದ್ಧಿ ಸಾಧ್ಯ

ಕೆರೂರ ಗ್ರಾಮದ ಅಪ್ಪಯ್ಯಗೌಡ ಪಾಟೀಲ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸುವರ್ಣ ಮಹೋತ್ಸವಕ್ಕೆ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಪ್ರಕಾಶ ಹುಕ್ಕೇರಿ, ಬಸಗೌಡ ಪಾಟೀಲ, ಮಲ್ಲಿಕಾರ್ಜುನ ಪಾಟೀಲ ಇತರರು ಚಾಲನೆ ನೀಡಿದರು.
ಕೆರೂರ ಗ್ರಾಮದ ಅಪ್ಪಯ್ಯಗೌಡ ಪಾಟೀಲ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸುವರ್ಣ ಮಹೋತ್ಸವಕ್ಕೆ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಪ್ರಕಾಶ ಹುಕ್ಕೇರಿ, ಬಸಗೌಡ ಪಾಟೀಲ, ಮಲ್ಲಿಕಾರ್ಜುನ ಪಾಟೀಲ ಇತರರು ಚಾಲನೆ ನೀಡಿದರು.
Published on

ಚಿಕ್ಕೋಡಿ:

ರೈತ ದೇಶದ ಬೆನ್ನೆಲುಬು. ಕೃಷಿಕರ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರೈತರಲ್ಲಿ ಸ್ವಾರ್ಥ ಮನೋಭಾವ ಇರುವುದಿಲ್ಲ. ನಿಸ್ವಾರ್ಥದಿಂದ ಕೆಲಸ ಮಾಡುವ ಬಡ ರೈತರಿಗೆ ಸಹಕಾರ ಸಂಘಗಳು ವರದಾನವಾಗಿವೆ. ಸಹಕಾರ ಸಂಘಗಳಿಂದ ಗ್ರಾಮೀಣಾಭಿವೃದ್ಧಿ ಸಾಧ್ಯ ಎಂದು ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಕೆರೂರ ಗ್ರಾಮದ ಅಪ್ಪಯ್ಯಗೌಡ ಪಾಟೀಲ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸುವರ್ಣ ಮಹೋತ್ಸವ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದ ನಬಾರ್ಡ್ ಐಡಿಎಫ್ ಯೋಜನೆಯಡಿ ಮಂಜೂರಾದ 36.75 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ಗೋದಾಮು ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ 37 ಸಹಕಾರ ಸಂಘದ ಗೋದಾಮುಗಳಿಗೆ ಒಟ್ಟು 17 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಕೆರೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 54 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ಗ್ರಾಮಗಳಿಗೆ ಹಲವು ಸರ್ಕಾರದ ಯೋಜನೆಗಳನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಗಣೇಶ ಹುಕ್ಕೇರಿ ನೇತೃತ್ವದಲ್ಲಿ ಶ್ರಮಿಸಲಾಗುವುದು ಎಂದರು.
ಪ್ರಕಾಶ ಹುಕ್ಕೇರಿ ಹಾಗೂ ಸಂಘದ ಅಭಿವೃದ್ಧಿಗಾಗಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಸಂಘದ ಮೃತ ಸದಸ್ಯರ ವಾರಸುದಾರರಿಗೆ ಮರಣೋತ್ತರ ವಿಮೆ ಹಣ ಹಾಗೂ ಅಪಘಾತ ವಿಮೆ ಫಲಾನುಭವಿಗಳಿಗೆ ವಿಮೆ ಹಣದ ಚೆಕ್ ವಿತರಿಸಲಾಯಿತು. ಸುವರ್ಣಮಹೋತ್ಸವ ಅಂಗವಾಗಿ ಎಲ್ಲ ಸದಸ್ಯರಿಗೆ ಬೆಳ್ಳಿ ನಾಣ್ಯ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಬಸಗೌಡ ಪಾಟೀಲ, ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ದ್ರಾಕ್ಷಾರಸ ಮಂಡಳಿ ಮಾಜಿ ಅಧ್ಯಕ್ಷ ರವೀಂದ್ರ ಮಿರ್ಜೆ, ಬ್ಯಾಂಕ್ ನಿರೀಕ್ಷಕ ಅಮರ ರೊಡ್ಡನ್ನವರ, ಸಾಮಾಜಿಕ ಕಾರ್ಯಕರ್ತ ರವೀಂದ್ರ ಪಾಟೀಲ, ಸಂಘದ ಆಡಳಿತ ಮಂಡಳಿ ಸದಸ್ಯರಾದ ಕಲ್ಲಪ್ಪ ಕಾನಡೆ, ಮಾಯಗೌಡ ಪಾಟೀಲ, ವಿರೇಂದ್ರ ಪಾಟೀಲ, ಮಲ್ಲಪ್ಪ ಬಾಗಿ, ವಿಠ್ಠಲ ವಾಳಕೆ, ಸಿದ್ದಪ್ಪ ಚುಬಚೆ, ರಾಮು ಹಿರೇಕುಡಿ, ಪುಷ್ಪಾವತಿ ಈಶ್ವರ ಶಿಂಧೆ, ಗೌರವ್ವ ಕೇದಾರಿ, ಅಪ್ಪಯ್ಯಗೌಡ ಪಾಟೀಲ ಕೃಷಿ ಸಹಕಾರ ಸಂಘ, ಕ್ರೆಡಿಟ್ ಸೊಸೈಟಿ, ಕೆರೂರ ಹಾಲು ಉತ್ಪಾದಕರ ಸಂಘದ ಸದಸ್ಯರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net