ಶಿಕ್ಷಕ, ರೈತರ ಋಣ ಬಹಳ ದೊಡ್ಡದು

ಮದಭಾವಿ ಎಸ್‌ಜಿಎಸ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 1995-96ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಗುರುವಂದನೆ ನಿಮಿತ್ತ ಶಿಕ್ಷಕರನ್ನು ಸ್ವಾಗತಿಸಿದರು. ಯತೀಶ್ವರಾನಂದ ಸ್ವಾಮೀಜಿ, ಬಸಗೌಡಾ ಪಾಟೀಲ ಇತರರಿದ್ದರು.
ಮದಭಾವಿ ಎಸ್‌ಜಿಎಸ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 1995-96ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಗುರುವಂದನೆ ನಿಮಿತ್ತ ಶಿಕ್ಷಕರನ್ನು ಸ್ವಾಗತಿಸಿದರು. ಯತೀಶ್ವರಾನಂದ ಸ್ವಾಮೀಜಿ, ಬಸಗೌಡಾ ಪಾಟೀಲ ಇತರರಿದ್ದರು.
Published on
ಸಂಬರಗಿ: ಶಿಕ್ಷಣ ನೀಡುವ ಗುರು ಮತ್ತು ಅನ್ನ ನೀಡುವ ರೈತರಿಗೆ ಋಣಿ ಇರಬೇಕು. ಗುರು ಶಿಕ್ಷಣ ನೀಡುವ ಜತೆಗೆ ವಿದ್ಯಾರ್ಥಿಗಳ ಚಾರಿತ್ರ್ಯ ಸುಧಾರಿಸುವ ಕೆಲಸ ಮಾಡುತ್ತಾರೆ ಎಂದು ಕಾಗವಾಡದ ಯತೀಶ್ವರಾನಂದ ಸ್ವಾಮೀಜಿ ಹೇಳಿದರು.ಸಮೀಪದ ಮದಭಾವಿ ಗ್ರಾಮದಲ್ಲಿರುವ ಎಸ್‌ಜಿಎಸ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ 1995-96ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರನ್ನು ಗೌರವಿಸುವ ಕೆಲಸವಾಗಬೇಕು ಎಂದರು.
ಅರಳಹಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸಗೌಡಾ ಪಾಟೀಲ ಮಾತನಾಡಿ, ರಾಯಬಾಗ ಶಿಕ್ಷಣ ಪ್ರಸಾರಕ ಮಂಡಳಿ 1975ರಲ್ಲಿ ಶಾಲೆ ಪ್ರಾರಂಭಿಸಿ ಅನೇಕ ಯುವಕರಿಗೆ ಶಿಕ್ಷಣ ನೀಡಿದೆ. ಇಲ್ಲಿ ಕಲಿತ ಅನೇಕರು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಶಿಕ್ಷಕರ ಮೇಲೆ ಹೂವು ಹಾಕಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಪ್ರಾಂಶುಪಾಲೆ ಎಸ್. ಬಿ.ಲೋಟೆ, ನಿವೃತ್ತ ಪ್ರಾಚಾರ್ಯ ಅಣ್ಣಾಸಾಹೇಬ ಅಡಹಳ್ಳಿ, ಉಪಪ್ರಾಚಾರ್ಯ ಪಿ.ಎಂ.ಬಡಿಗೇರ, ನಿವೃತ್ತ ಶಿಕ್ಷಕರಾದ ಎಂ.ಎಸ್.ಮುಕರ್ತಾಳ, ಬಿ.ಬಿ.ಕುಂಬಾರ, ಎ.ಬಿ.ಪಾಟೀಲ, ಎಂ.ಆರ್.ಮಗದುಮ್ಮ, ವೈ.ವೈ.ಸನದಿ, ಎ.ಎಂ.ಬಾರ್ಲಿ, ಬಿ.ಎಂ.ಪತ್ತಾರ, ಎ.ಬಿ.ಮಗದುಮ್ಮ, ಬಿ.ಎಸ್.ಅಧಣಿ, ವೈ.ಎಸ್.ನಾವಲಗಿ, ಎಸ್.ಪಿ.ಸಂಭಾಜಿ, ಎಂ.ಎಸ್.ಅಪರಾಜ, ಪಿ.ಡಿ.ಹಂದಿಕುಡಿ, ಎಸ್.ಎಸ್.ಕಾಂಬಳೆ, ವೈ.ಡಿ.ಸರಲಿ, ಎಲ್.ಎಸ್.ಪೂಜಾರಿ ಇತರರಿದ್ದರು. ಮಲ್ಲಯ್ಯ ಮಠಪತಿ ಸ್ವಾಗತಿಸಿದರು. ಕುಮಾರ ನಾವಿ ನಿರೂಪಿಸಿದರು. ಪಾರಿಸ್ ಕಾಂಬಳೆ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net