ಅಲೆಮಾರಿಗಳಿಗೆ ಮೀಸಲಾತಿ ನೀಡಿ: ಅಲೆಮಾರಿಗಳಿಗೆ ಪ್ರತ್ಯೇಕ ಶೇ.1ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಪ್ರತಿಭಟನೆ ನಡೆಸಲಾಯಿತು. ಅಲೆಮಾರಿಗಳಿಗೆ ನೀಡಿರುವ ಶೇ.1ರಷ್ಟು ಮೀಸಲಾತಿ ಕಿತ್ತು ಬೇರೆಯವರಿಗೆ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸದಾಶಿವ ಆಯೋಗ ಮಾಜಿ ಸಚಿವ ಮಾಧುಸ್ವಾಮಿ ಸಮಿತಿ ಮತ್ತು ನಾಗಮೋಹನದಾಸ ಆಯೋಗಗಳು ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿ ನೀಡಲು ಶಿಾರಸು ಮಾಡಿದ್ದವು. ಸರ್ಕಾರ ಮೀಸಲಾತಿ ಕಿತ್ತುಕೊಂಡಿದೆ. ಇದೀಗ ಅದನ್ನು ಮರಳಿ ನೀಡಬೇಕು ಎಂದು ಒತ್ತಾಯಿಸಿದರು. ಅಲೆಮಾರಿ ಸಮುದಾಯ ಬಹಳ ಹಿಂದುಳಿದ ಸಮುದಾಯವಾಗಿದೆ. ನಮಗೆ ಮೀಸಲಾತಿ ನೀಡುವವರಿಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು. ಸುಡುಗಾಡು ಹುಸೇನಪ್ಪ, ಮಾರುತಿ, ತಿಪ್ಪೇಶಪ್ಪ, ಸಿಂದೊಳ್ಳಿ ಶ್ರೀನಿವಾಸ ಇತರರಿದ್ದರು.