ಕಾರಂಜಿಮಠದಲ್ಲಿ ಹಮ್ಮಿಕೊಂಡಿದ್ದ 295ನೇ ಶಿವಾನುಭವ ಕಾರ್ಯಕ್ರಮದಲ್ಲಿ ವಿಶ್ವರತ್ನ ಪ್ರಶಸ್ತಿ ವಿಜೇತ ಡಾ.ಮಹಾಂತೇಶ ರಾಮಣ್ಣವರ ಅವರನ್ನು ಸನ್ಮಾನಿಸಲಾಯಿತು. ಗುರುಸಿದ್ಧ ಸ್ವಾಮೀಜಿ, ರಾಘವೇಂದ್ರ ಕಾಗವಾಡ, ರತ್ನಪ್ರಭಾ ಬೆಲ್ಲದ, ಎ್.ವಿ.ಮಾನ್ವಿ, ಮಹಾಂತೇಶ ವಕ್ಕುಂದ ಇತರರಿದ್ದರು.
Published on:
Copied
Follow Us
ಬೆಳಗಾವಿ: ಭಾರತದ ಮೇಲೆ ಹೊರಗಿನಿಂದ ಎಷ್ಟೇ ಆಕ್ರಮಣ ನಡೆದರೂ ಸಂತರ ಶಕ್ತಿಯಿಂದ ದೇಶ ಗಟ್ಟಿಯಾಗಿ ಉಳಿದಿದೆ. ಸಂತ-ಮಹಾಂತರು, ಯೋಗಿಗಳಿಂದ ನಮ್ಮ ಸಂಸ್ಕೃತಿ ಸಂಪನ್ನವಾಗಿದೆ ಎಂದು ರಾಘವೇಂದ್ರ ಕಾಗವಾಡ ಅಭಿಪ್ರಾಯಪಟ್ಟರು.
ಇಲ್ಲಿನ ಶಿವಬಸವನಗರದ ಕಾರಂಜಿಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 295ನೇ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಂತ ಸಂಕುಲದಿಂದಲೇ ಮನುಕುಲದ ಏಳಿಗೆ ಆಗುತ್ತದೆ. ಭಾರತೀಯ ಸಂತ ಪರಂಪರೆ ತನ್ನದೇ ಆದ ಘನತೆ ಹೊಂದಿದೆ. ಇದನ್ನು ಉಳಿಸಿ ಬೆಳೆಸಿಕೊಂಡ ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಾಹಿತಿ ಡಾ.ಬಸವರಾಜ ಜಗಜಂಪಿ ಮಾತನಾಡಿ, ಸಂತ-ಮಹಾಂತರು ತಮ್ಮ ತ್ಯಾಗ ಜೀವನದ ಮೂಲಕ ಲೋಕಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಅವರ ಬದುಕು ನಮಗೆ ಬೆಳಕಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಶಿವಾನುಭವ ಕಾರ್ಯಕ್ರಮವನ್ನು ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಸಮರ್ಪಿಸಲಾಗಿದೆ. ಸಿದ್ಧೇಶ್ವರ ಸ್ವಾಮೀಜಿ ಜೀವಸಂಕುಲಕ್ಕೆ ಮಾದರಿ ಆದವರು. ಅಂಥ ಮಹಾತ್ಮರಿಂದ ವಿಶ್ವಶಾಂತಿ, ಜಾಗತಿಕ ನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.
ವಿಶ್ವರತ್ನ ಪ್ರಶಸ್ತಿ ಪಡೆದ ಡಾ.ಮಹಾಂತೇಶ ರಾಮಣ್ಣವರ ಅವರನ್ನು ಸನ್ಮಾನಿಸಲಾಯಿತು. ರತ್ನಪ್ರಭಾ ಬೆಲ್ಲದ,