ಸಂಕೇಶ್ವರ: ಅನೇಕ ಹೋರಾಟಗಾರರ ತ್ಯಾಗ, ಬಲಿದಾನ ಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು, ಇದರ ಇತಿಹಾಸ ಹಾಗೂ ದೇಶ ರಕ್ಷಣೆ, ಪ್ರಗತಿಗೆ ಶ್ರಮಿಸಿದ ಮಹನೀಯರ ಕೊಡುಗೆಯನ್ನು ಯುವಪೀಳಿಗೆ ಅರಿತುಕೊಳ್ಳಬೇಕು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಯುವಜನರು ಸೋಮವಾರ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿ, ದೇಶದ ಏಕತೆ, ಅಖಂಡತೆ ಹಾಗೂ ಸಾರ್ವಭೌಮತ್ವ ಕಾಪಾಡುವ ಸಂಕಲ್ಪದೊಂದಿಗೆ ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಜಿಪಂ ಮಾಜಿ ಸದಸ್ಯ ಪವನ ಕತ್ತಿ ಮಾತನಾಡಿ, ಹರ್ ಘರ್ ತಿರಂಗಾ ಕೇವಲ ಧ್ವಜಾರೋಹಣದ ಕಾರ್ಯಕ್ರಮವಾಗದೇ, ಪ್ರತಿಯೊಬ್ಬರ ಮನದಲ್ಲಿ ದೇಶಪ್ರೇಮದ ಭಾವನೆ ಗಟ್ಟಿಗೊಳಿಸುವ ಅಭಿಯಾನವಾಗಬೇಕು ಎಂದು ತಿಳಿಸಿದರು.
ಗಾಂಧಿ ಚೌಕನಿಂದ ಆರಂಭಗೊಂಡ ರ‌್ಯಾಲಿ ಸುಭಾಸ ರಸ್ತೆ, ಸಂಕೇಶ್ವರ-ಗೋಕಾಕ ರಸ್ತೆ, ಹಳೇ ಪಿಬಿ ರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಮಾರ್ಗಮಧ್ಯೆ ವಿವಿಧ ವೃತ್ತಗಳಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮ ಯೋಧರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕರಾದ ಶಿವಾನಂದ ಮುಡಶಿ, ಗಜಾನನ ಕ್ವಳ್ಳಿ, ಮಹಾದೇವ ಕ್ಷೀರಸಾಗರ, ಮುಖಂಡರಾದ ಸುನೀಲ ಪರ್ವತರಾವ, ರೋಹನ ನೇಸರಿ, ಅನಿಲ ಖಾನಾಯಿ, ಅಶೋಕ ಮಸ್ತಿ, ಅಶೋಕ ಹಿರೆಕೋಡಿ, ವಿಜಯ ಶೆರೆಕರ, ಸಾಗರ ಕ್ವಳ್ಳಿ, ಜಯಪ್ರಕಾಶ ಸಾವಂತ, ಆನಂದ ಸಂಸುದ್ಧಿ, ಚೇತನ ಬಶೆಟ್ಟಿ ಇತರರಿದ್ದರು.