ರೈತರನ್ನು ಬೀದಿಗೆ ತಂದ ಕಾಂಗ್ರೆಸ್​ ಸರ್ಕಾರ

ಸೋನಾಲಿ ಸನೋರ್ಬತ್​
ಸೋನಾಲಿ ಸನೋರ್ಬತ್​
Published on
> ಬಿಜೆಪಿ ನಾಯಕಿ ಸೋನಾಲಿ ಸನೋರ್ಬತ್​ ಆಕ್ರೋಶ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯದ ಕಾಂಗ್ರೆಸ್​ ಸರ್ಕಾರ ತನ್ನ ದುರಾಡಳಿತದಿಂದ ರೈತರು ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ತಂದಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ.ಸೋನಾಲಿ ಸನೋರ್ಬತ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಬಿಜೆಪಿ ಏರ್ಪಡಿಸಿದ್ದ ಪ್ರತಿಭಟನಾ ರ್ಯಾಲಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಬೇಡಿಕೆಗಳನ್ನು ರ್ನಿಲಸುತ್ತ ಬಂದಿದೆ ಎಂದು ಆರೋಪಿಸಿದರು.
ರಾಜ್ಯದ ಕಬ್ಬು ಬೆಳೆಗಾರರು ಬೆಂಬಲ ಬೆಲೆ ಕೇಳುತ್ತಿದ್ದಾರೆ. ಕಟಾವು, ಸಾಗಣೆ ವೆಚ್ಚ ಏರಿಕೆ ಹಾಗೂ ಬಾಕಿ ಬಿಲ್​ ಪಾವತಿ ವಿಳಂಬದಿಂದಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರ ಮೌನವಹಿಸಿರುವುದು ಸರಿಯಲ್ಲ. ಸಾಲ, ಬರಗಾಲ, ಪ್ರಕೃತಿ ವಿಕೋಪದಂತಹ ಅನೇಕ ಸವಾಲು ಎದುರಿಸಿ ರೈತ ಬೆಳೆ ತೆಗೆದು, ಈಗ ಅದಕ್ಕೆ ಬೆಲೆ ಪಡೆಯಲು ಹೋರಾಡುವ ಸ್ಥಿತಿ ಬಂದಿರುವುದು ಉತ್ತಮ ಬೆಳವಣಿಗೆಯಲ್ಲ. ಇದರಿಂದ ಕೃಷಿಯಲ್ಲಿ ನಿರಾಸಕ್ತಿಗೊಳ್ಳುವಂತೆ ಆಗಿದೆ ಎಂದು ದೂರಿದರು.
ಸಕ್ಕರೆ ಕಾರ್ಖಾನೆಗಳ ಶೋಷಣೆಯಿಂದ ರೈತರನ್ನು ರಸುವಲ್ಲಿ ಸರ್ಕಾರ ವಿಲವಾಗಿದೆ. ಇದನ್ನು ವಿರೋಧಿಸಿ ರೈತರು ಶಾಂತಿಯುತವಾಗಿ ಪ್ರತಿಭಟಿಸಿದಾಗ ಸೌಜನ್ಯಕ್ಕಾದರೂ ಸ್ಪಂದಿಸಬೇಕಿತ್ತು. ಆದರೆ ಅದು ರಾಜಕೀಯದಲ್ಲೇ ಮುಳುಗಿದೆ. ಇದರಿಂದ ಬಿಜೆಪಿ ರೈತರೊಂದಿಗೆ ನಿಲ್ಲುತ್ತಿದೆ. ಪಕ್ಷದ ಕಾರ್ಯಕರ್ತನಾಗಿ ವೈಯಕ್ತಿಕವಾಗಿಯೂ ರೈತ ಪರವಾಗಿ ಹೋರಾಟ ಮಾಡುತ್ತೇನೆ ಎಂದರು.
ರೈತರು ದಾನ ಕೇಳುತ್ತಿಲ್ಲ, ನ್ಯಾಯ ಕೇಳುತ್ತಿದ್ದಾರೆ. ಸರ್ಕಾರ ನೆಪ ಹೇಳದೆ ಬೇಡಿಕೆ ಈಡೇರಿಸಲು ಸ್ಪಂದಿಸಬೇಕು. ರೈತರಿಗೆ ನ್ಯಾಯ ಸಿಗುವವರೆಗೂ ನಾವು ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net