ಕೇಂದ್ರದ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಬದಲು ತೆರಿಗೆ ಕಡಿಮೆ ಮಾಡಿದರೆ ಈ ಸಮಸ್ಯೆ ಬರುವುದಿಲ್ಲ. ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ಮಾಡಿ ಸಾರ್ವಜನಿಕರ ಹಿತ ಕಾಪಾಡಬೇಕು. ತೆರಿಗೆ ತುಂಬಿಸಿಕೊಂಡು ಅದರಲ್ಲಿ ಉಳಿದ ಹಣ ತೈಲಕ್ಕೆ ಬಳಸಬಹುದಾಗಿದೆ. ಆದರೆ, ಕೇಂದ್ರ ಸರ್ಕಾರ ತೈಲ ಬೆಲೆ ಹೆಚ್ಚಿಸಿ ಬಡಜನರಿಗೆ ತೊಂದರೆ ನೀಡಿದೆ ಎಂದು ಆರೋಪಿಸಿದರು. ಭೂ ಸೇನಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಸಂತೋಷ ಶೇಗುಣಿಸಿ, ಪರಶುರಾಮ ಪತ್ತಾರ, ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಸದಸ್ಯರಾದ ಸಂತೋಷ ಸಾವಡಕರ, ರಾಜು ಗುಡೋಡಗಿ, ರಾವಸಾಹೇಬ ಐಹೊಳೆ, ಮಲ್ಲು ಬುಟಾಳೆ, ಕಲ್ಮೇಶ ಮಡ್ಡಿ, ಮಲ್ಲೇಶ ಹುದ್ದಾರ, ಪ್ರಮೋದ ಬಿಳ್ಳೂರ, ಉದಯ ಸೊಳಸಿ, ಶಶಿಕಾಂತ ಹುಲಕುಂದಮ ಕಾರ್ಯಕರ್ತರಾದ ಶಂಕರ ಹಿರೇಮನಿ, ಬೀರಪ್ಪ ಯಂಕಚ್ಚಿ, ರಾಜು ಢಾಲೆ, ರವಿ ಬಡಕಂಬಿ, ಅಡಿವೆಪ್ಪ ಉಳ್ಳಾಗಡ್ಡಿ ಇತರರಿದ್ದರು.