ಪಂದ್ಯಾವಳಿಯ ಆಯೋಜಕ ಪ್ರತಿಷ್ಠಾನದ ಸಂಸ್ಥಾಪಕ ಮುರಘೇಂದ್ರಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಫೆ.22ರವರೆಗೆ ನಡೆಯುವ ಟೂರ್ನಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ಉತ್ತರ ಪ್ರದೇಶ, ದೆಹಲಿ, ಗೋವಾದ ತಂಡಗಳು ಭಾಗಹಿಸುತ್ತಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಕೆಟ್ ಪಂದ್ಯಗಳಲ್ಲಿ, ರಣಜಿ, ಐಪಿಎಲ್‌ನಲ್ಲಿ ಆಡಿರುವ ಕ್ರಿಕೆಟಿಗರು ಒಂದೊಂದು ತಂಡದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಥಮ ತಂಡಕ್ಕೆ 5,27,127 ರೂ., ದ್ವಿತೀಯ ಸ್ಥಾನಕ್ಕೆ 2,51,127ರೂ. ನಗದು ಬಹುಮಾನ, ಸರಣಿ ಶ್ರೇಷ್ಠ ಕ್ರೀಡಾಪಟುವಿಗೆ ಬೈಕ್ ಸೇರಿದಂತೆ ವೈಯಕ್ತಿಕ ವಿಭಾಗದಲ್ಲಿ ವಿವಿಧ ಆಕರ್ಷಕ ಬಹುಮಾನಗಳಿವೆ ಎಂದು ವಿವರಿಸಿದರು.