ಜ್ಞಾನದಲ್ಲಿದೆ ಬದುಕಿನ ಪ್ರಶ್ನೆಗಳಿಗೆ ಉತ್ತರ

ನಿಪ್ಪಾಣಿಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದವಿ ದಿನ ಕಾರ್ಯಕ್ರಮವನ್ನು ಕೆ.ಎಂ.ಜಾನಕಿ, ಚಂದ್ರಕಾಂತ ಕೋಠಿವಾಲೆ, ಪಪ್ಪು ಪಾಟೀಲ ಉದ್ಘಾಟಿಸಿದರು. ಸಂಜಯ ಮೊಳವಾಡೆ, ಸಮೀರ ಬಾಗೇವಾಡಿ ಇತರರಿದ್ದರು.
ನಿಪ್ಪಾಣಿಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದವಿ ದಿನ ಕಾರ್ಯಕ್ರಮವನ್ನು ಕೆ.ಎಂ.ಜಾನಕಿ, ಚಂದ್ರಕಾಂತ ಕೋಠಿವಾಲೆ, ಪಪ್ಪು ಪಾಟೀಲ ಉದ್ಘಾಟಿಸಿದರು. ಸಂಜಯ ಮೊಳವಾಡೆ, ಸಮೀರ ಬಾಗೇವಾಡಿ ಇತರರಿದ್ದರು.
Published on
ನಿಪ್ಪಾಣಿ:
ಗುರುಗಳು ಮತ್ತು ಪಠ್ಯಪುಸ್ತಕದಿಂದ ಸಿಗುವ ಜ್ಞಾನ ಜೀವನದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತದೆ. ಗುರುಗಳಿಗೆ ಮತ್ತು ಪಾಲಕರಿಗೆ ಕೃತಜ್ಞತೆ ಸಲ್ಲಿಸುವ ಗುಣ ಬೆಳೆಸಿಕೊಂಡಲ್ಲಿ ಬದುಕು ಸುಖವಾಗಿರುತ್ತದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಹೇಳಿದರು.
ಸ್ಥಳೀಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪದವಿ ದಿನ
ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವವರಲ್ಲಿ ಶೇ.40ರಷ್ಟು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇರುತ್ತಾರೆ ಎಂದು ತಿಳಿಸಿದರು.
ಉಪ ಕಾರ್ಯಾಧ್ಯಕ್ಷ ಪಪ್ಪು ಪಾಟೀಲ ಮಾತನಾಡಿ, ಬಿಇ ವಿದ್ಯಾರ್ಥಿಗಳಿಗಾಗಿ
6ನೇ ಸೆಮಿಸ್ಟರ್‌ದಿಂದಲೇ ಕ್ಯಾಂಪಸ್ ಸಂದರ್ಶನ ನಡೆಸಲಾಗುವುದು. ಜತೆಗೆ ಸಂದರ್ಶನವನ್ನು ಆಯೋಜಿಸಲಾಗುವುದು. ವಿಎಸ್‌ಎಂ ಶಿಷ್ಯ ವೇತನದ ಪ್ರಯೋಜನ ಪಡೆದು ಜೀವನ ಸಾರ್ಥಕ್ಯದತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಸಂಚಾಲಕ ಸಂಜಯ ಶಿಂತ್ರೆ, ಸಿಇಒ ಡಾ.ಸಿದ್ಧಗೌಡ ಪಾಟೀಲ, ಪ್ರಾಚಾರ್ಯ ಡಾ.ಉಮೇಶ ಪಾಟೀಲ ಮಾತನಾಡಿದರು. ಬಿಇ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿವಿಧೆಡೆ ಉನ್ನತ ಹುದ್ದೆ ಅಲಂಕರಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ರಜತ ಢೋಲೆ, ಕಾರ್ಯದರ್ಶಿ ಸಮೀರ್ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಸಂಜಯ ಮೊಳವಾಡೆ, ಸಚಿನ ಹಾಲಪ್ಪನವರ, ಶೇಖರ ಪಾಟೀಲ, ಅವಿನಾಶ ಪಾಟೀಲ, ಪ್ರವೀಣ ಪಾಟೀಲ, ಡಿಪ್ಲೊಮಾ ಪ್ರಾಚಾರ್ಯ ಬಸವರಾಜ ಕರೋಶಿ, ವಿಜಯ ಮೇತ್ರಾಣಿ, ಡಾ.ವೀರೇಶ ಮಠದ, ಡಾ.ಪ್ರಭಾಕರ ಮುತಾಲಿಕದೇಸಾಯಿ ಇತರರಿದ್ದರು.
ಉಜ್ವಲಕುಮಾರ ಗಚ್ಚಿ ಪ್ರಾರ್ಥಿಸಿದರು. ಪ್ರೊ.ಸಂತೋಷ ಕೋಳಕಿ ಸ್ವಾಗತಿಸಿದರು. ಡಾ.ಮಲ್ಲೇಶ ಜಕನೂರ ಪರಿಚಯಿಸಿದರು. ಪ್ರೊ. ಕವಿತಾ ವಸೇದಾರ ಮತ್ತು ಪ್ರೊ.ಮಾಧವಿ ಅವಳೇಕರ ನಿರೂಪಿಸಿದರು. ಪ್ರೊ.ರಾಹುಲ ಪಾಲಕರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net