ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೆಸ್ಟ್​ ಸರಣಿ ಆಯೋಜನೆ

ಬೆಳಗಾವಿ ನಗರದ ಜಿಲ್ಲಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ಪ್ರಸಾದ ಮಾತನಾಡಿದರು. ಸುಜಿತ್​ ಸೋಮಸುಂದರ್​, ಸಂತೋಷ ಮೆನನ್​, ಅವಿನಾಶ ಪೋತದಾರ ಇತರರಿದ್ದರು.
ಬೆಳಗಾವಿ ನಗರದ ಜಿಲ್ಲಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವೆಂಕಟೇಶ ಪ್ರಸಾದ ಮಾತನಾಡಿದರು. ಸುಜಿತ್​ ಸೋಮಸುಂದರ್​, ಸಂತೋಷ ಮೆನನ್​, ಅವಿನಾಶ ಪೋತದಾರ ಇತರರಿದ್ದರು.
Published on
ಬೆಳಗಾವಿ: ಮುಂಬರುವ ದಿನಗಳಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಏಕದಿನ, ಟೆಸ್ಟ್​ ಸರಣಿ, ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಪಂದ್ಯ ಆಯೋಜಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ (ಕೆಎಸ್​ಸಿಎ) ಅಧ್ಯಕ್ಷ ವೆಂಕಟೇಶ ಪ್ರಸಾದ ತಿಳಿಸಿದರು.
ನಗರದ ಕಣಬರ್ಗಿ ರಸ್ತೆಯಲ್ಲಿರುವ ಕ್ರಿಕೆಟ್​ ಸ್ಟೇಡಿಯಂ ವೀಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 50 ವರ್ಷದಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಅಹಿಕರ ಟನೆ ನಡೆದಿರಲಿಲ್ಲ. ಆದರೆ, ಆರ್​ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ದುರ್ಟನೆ ಎಲ್ಲರ ಮನಸ್ಸು ಘಾಸಿ ಮಾಡಿದೆ. ಇಂತಹ ಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಸಂಭವಿಸಿದ ಬಳಿಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಂದ್ಯಗಳು ಕೈತಪ್ಪಿವೆ. ಟಿ&20 ವಿಶ್ವಕಪ್​ ಕ್ರಿಕೆಟ್​ ಟೂರ್ನಿ ವೇಳಾಪಟ್ಟಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಪರಿಗಣಿಸಲಾಗಿಲ್ಲ. ಹೀಗಾಗಿ ಸುರಕ್ಷತೆಗೆ ವರದಿ ಸಲ್ಲಿಸಲಾಗುವುದು. ಅಲ್ಲದೆ, ಭಾರತೀಯ ಕ್ರಿಕೆಟ್​ ಮಂಡಳಿ (ಬಿಸಿಸಿಐ) ಸಂಪರ್ಕಿಸಲಾಗುವುದು ಎಂದರು.
ಬೆಳಗಾವಿ, ಹುಬ್ಬಳ್ಳಿ&ಧಾರವಾಡ, ತುಮಕೂರು, ಮೈಸೂರು, ಶಿವಮೊಗ್ಗ ಹೀಗೆ ವಿವಿಧ ಜಿಲ್ಲೆಗಳಲ್ಲಿ ಕ್ರಿಕೆಟ್​ ಸ್ಟೇಡಿಯಂಗಳನ್ನು ಸಮಗ್ರ ಅಭಿವೃದ್ಧಿಪಡಿಸಿ ರಣಜಿ ಕ್ರಿಕೆಟ್​ ಪಂದ್ಯಗಳನ್ನು ಆಯೋಜಿಸಲಾಗುವುದು. ವರ್ಷದಲ್ಲಿ 2ರಿಂದ 4 ಬಾರಿ ಕ್ರಿಕೆಟ್​ ಪಂದ್ಯ ಆಯೋಜಿಸುವ ಮೂಲಕ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಿಕೊಡಲಾಗುವುದು. ಜಿಲ್ಲಾಮಟ್ಟದಲ್ಲೇ ಕ್ರಿಕೆಟ್​ ಅಕಾಡೆಮಿ ಸ್ಥಾಪಿಸಿ ಗ್ರಾಮೀಣ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ ಎಂದರು.
ಕೆಎಸ್​ಸಿಎ ಮಾಜಿ ಅಧ್ಯಕ್ಷ ಅನಿಲ್​ ಕುಂಬಳೆ 2010ರಿಂದ 2013ರವರೆಗಿನ ಅವಧಿಯಲ್ಲಿ ಜಿಲ್ಲಾ ಸ್ಟೇಡಿಯಂಗಳಿಗೆ ಕಟ್ಟಡ, ಜಿಮ್​, ಈಜುಕೊಳ ಸೇರಿ ಎಲ್ಲ ಸಕಲ ಸೌಲಭ್ಯ ಕಲ್ಪಿಸಿ ರಣಜಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ನಂತರ ಅಧಿಕಾರಕ್ಕೆ ಬಂದವರು ಯಾವುದೇ ಪಂದ್ಯ ಆಯೋಜಿಸಲಿಲ್ಲ. ಜತೆಗೆ ಸ್ಟೇಡಿಯಂಗಳ ನಿರ್ವಹಣೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಕ್ರಿಕೆಟ್​ ಸಂಸ್ಥೆ ಮಾಜಿ ಜಿಲ್ಲಾಧ್ಯಕ್ಷ ಅವಿನಾಶ ಪೋತದಾರ ಮಾತನಾಡಿ, ಈ ಬಾರಿ ರಾಜ್ಯ ಕ್ರಿಕೆಟ್​ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಪ್ರಸಾದ ಅವರ ಆಡಳಿತಾವಧಿಯಲ್ಲಿ ಜಿಲ್ಲಾ ಸ್ಟೇಡಿಯಂಗಳಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯಲಿವೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸೌಕರ್ಯ ಕಲ್ಪಿಸುವ ಮೂಲಕ ಸ್ಟೇಡಿಯಂಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಉಪಾಧ್ಯಕ್ಷ ಸುಜಿತ್​ ಸೋಮಸುಂದರ್​, ಪ್ರಧಾನ ಕಾರ್ಯದರ್ಶಿ ಸಂತೋಷ ಮೆನನ್​, ಖಜಾಂಚಿ ವಿನಯ ಮೃತ್ಯುಂಜಯಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net