ಕ್ಯಾನ್ಸರ್ ಚಿಕಿತ್ಸೆಗೆ ತಂತ್ರಜ್ಞಾನ ಪೂರಕ

ಬೆಳಗಾವಿ ನಗರದಲ್ಲಿ ಕಾಹೆರ ವತಿಯಿಂದ ಈಚೆಗೆ ಆಯೋಜಿಸಿದ್ದ ಅತಿಥಿ ಉಪನ್ಯಾಸ ಮಾಲೆಯಲ್ಲಿ ಸಂಶೋಧಕಿ ಡಾ.ಜ್ಯೋತಿ ಆನಂದ ಕೋಡೆ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಸಂದೀಪ  ಶ್ರೀವಾಸ್ತವ, ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ರಮೇಶ ಪರಾಂಜಪೆ, ಡಾ.ದೀಪಾ ಮಾನೆ ಇತರರಿದ್ದರು.
ಬೆಳಗಾವಿ ನಗರದಲ್ಲಿ ಕಾಹೆರ ವತಿಯಿಂದ ಈಚೆಗೆ ಆಯೋಜಿಸಿದ್ದ ಅತಿಥಿ ಉಪನ್ಯಾಸ ಮಾಲೆಯಲ್ಲಿ ಸಂಶೋಧಕಿ ಡಾ.ಜ್ಯೋತಿ ಆನಂದ ಕೋಡೆ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಸಂದೀಪ ಶ್ರೀವಾಸ್ತವ, ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ರಮೇಶ ಪರಾಂಜಪೆ, ಡಾ.ದೀಪಾ ಮಾನೆ ಇತರರಿದ್ದರು.
Published on
ಬೆಳಗಾವಿ: ನಗರದ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಕಾಹೆರ) ವತಿಯಿಂದ ಈಚೆಗೆ ಆಯೋಜಿಸಿದ್ದ 100ನೇ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸ ಮಾಲೆ ಯಶಸ್ವಿಯಾಗಿ ನಡೆಯಿತು. ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಸಂಶೋಧನಾ ಕೊಡುಗೆ ನೀಡಿರುವ ದೇಶದ ಪ್ರಮುಖ ಸಂಶೋಧಕರು ಭಾಗವಹಿಸಿದ್ದರು.
ಕುಲಸಚಿವ ಡಾ.ವಿಶ್ವನಾಥ ಪಟ್ಟಣಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಉಪನ್ಯಾಸ ಮಾಲೆ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಡಾ.ಜ್ಯೋತಿ ಆನಂದ ಕೋಡೆ ಮಾತನಾಡಿ, ಕೈಗೆಟುಕುವ ದರದ ಕ್ಯಾನ್ಸರ್ ವಿರೋಧಿ ಮತ್ತು ರೋಗನಿರೋಧಕ ನಿಯಂತ್ರಕ ಸಂಯೋಜನೆಗಳ ಪರಿಶೀಲನೆ ಅವಶ್ಯಕವಾಗಿದೆ.
ನವೀನ ಕ್ಯಾನ್ಸರ್ ಚಿಕಿತ್ಸಾ ವಿಧಾನಗಳು, ರೋಗನಿರೋಧಕ ಶಕ್ತಿ ವೃದ್ಧಿಸುವ ವಿಧಾನಗಳು ಹಾಗೂ ಸುಲಭವಾಗಿ ಲಭ್ಯವಾಗುವ ಆರೋಗ್ಯ ಪರಿಹಾರ ಕುರಿತು ಸಂಶೋಧನೆ ನಿರಂತರವಾಗಿ ನಡೆಯಬೇಕು. ಸಸ್ಯ ಆಧಾರಿತ ಉತ್ಪನ್ನಗಳ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಹಾಗೂ ಕ್ಯಾನ್ಸರ್ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಮೂಲ ರೋಗನಿರೋಧಕ ಪ್ರಕ್ರಿಯೆಗಳ ಕುರಿತು ತಿಳಿಸಿದರು.
ಕುಲಪತಿ ಪ್ರೊ.ಸಂದೀಪ ಶ್ರೀವಾಸ್ತವ, ಡಾ.ಪ್ರಭಾಕರ ಕೋರೆ ಮೂಲ ವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರಮೇಶ ಪರಾಂಜಪೆ, ಡಾ.ದೀಪಾ ಮಾನೆ, ಡಾ.ದೀಪಾ ಮಾನೆ ಇತರರಿದ್ದರು.
"

ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಲ್ಲಿ ಸಂಶೋಧನಾ ಪ್ರವೃತ್ತಿ ಹಾಗೂ ನಿರಂತರ ಅಧ್ಯಯನಶೀಲತೆಯನ್ನು ಬೆಳೆಸುವಲ್ಲಿ ಉಪನ್ಯಾಸ ಮಾಲಿಕೆಗಳು ನೆರವಾಗಲಿವೆ. ಇಂಥ ಕಾರ್ಯಕ್ರಮ ಆಯೋಜಿಸಿದ್ದ ಸಂಘಟಕರ ಪರಿಶ್ರಮ ಪ್ರಶಂಸಾರ್ಹ.

— | ಪ್ರೊ.ಸಂದೀಪ ಶ್ರೀವಾಸ್ತವ ಕಾಹೆರ ಕುಲಪತಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net