ಶಿಕ್ಷಕರು ವಿದ್ಯಾರ್ಥಿ ಜೀವನದ ಬೆಳಕು

ನಿಪ್ಪಾಣಿಯ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರ ನಿಯಮಿತ ಬ್ಯಾಂಕ್ ವತಿಯಿಂದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು. ಡಾ.ಸಿ.ಬಿ.ಕುರಬೇಟ, ಕಿಶೋರ ವಾಲಿ, ಎಸ್.ಆರ್.ಪಾಟೀಲ ಇತರರಿದ್ದರು.
ನಿಪ್ಪಾಣಿಯ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರ ನಿಯಮಿತ ಬ್ಯಾಂಕ್ ವತಿಯಿಂದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು. ಡಾ.ಸಿ.ಬಿ.ಕುರಬೇಟ, ಕಿಶೋರ ವಾಲಿ, ಎಸ್.ಆರ್.ಪಾಟೀಲ ಇತರರಿದ್ದರು.
Published on
ಚಿಕ್ಕೋಡಿ: ಶಿಕ್ಷಕರು ಕೇವಲ ಜ್ಞಾನ ನೀಡುವ ಮಾರ್ಗದರ್ಶಕರಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ, ಅವರ ಕನಸುಗಳಿಗೆ ಶಕ್ತಿ ಮತ್ತು ದಿಕ್ಕು ನೀಡುವ ದೀಪಸ್ತಂಭಗಳಾಗಿದ್ದಾರೆ ಎಂದು ತಾಲೂಕಿನ ಚಿಂಚಣಿ ಅಲ್ಲಮಪ್ರಭು ಮಠದ ಶಿವಪ್ರಸಾದ ದೇವರು ಅಭಿಮತ ವ್ಯಕ್ತಪಡಿಸಿದರು.
ನಿಪ್ಪಾಣಿ ಪಟ್ಟಣದ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರ ನಿಯಮಿತ ಬ್ಯಾಂಕ್ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆಯಲ್ಲಿ ಸದಸ್ಯರ ಪ್ರತಿಭಾವಂತ ಮಕ್ಕಳ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶಿಕ್ಷಕರು ಯಾವುದೇ ಭೇದ ಮಾಡದೆ, ವಿದ್ಯಾರ್ಥಿಗಳಿಗೆ ಶಿಸ್ತು, ಸಂಸ್ಕಾರ ನೀಡುತ್ತಾರೆ. ಪ್ರತಿಯೊಬ್ಬರೂ ಶಿಕ್ಷಕರಿಗೆ ಗೌರವ ಸಲ್ಲಿಸಬೇಕು. ಶಿಕ್ಷಕರ ದಿನಾಚರಣೆ ಅಂಗವಾಗಿ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರ ಬ್ಯಾಂಕ್ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಡಾ.ಸಿ.ಬಿ.ಕುರಬೇಟ ಮಾತನಾಡಿದರು. ವಿದ್ಯಾರ್ಥಿಗಳಿಗೆ ವಚನ ಕಂಠಪಾಠ, ಭಾಷಣ ಮತ್ತು ವೇಷಭೂಷಣ ಸ್ಪರ್ಧೆ ಹಾಗೂ ಆದರ್ಶ ಶಿಕ್ಷಕರ ಸನ್ಮಾನ ಸಮಾರಂಭ ಜರುಗಿತು.
ಸಂಸ್ಥೆ ಅಧ್ಯಕ್ಷ ಕಿಶೋರ ವಾಲಿ, ನಿರ್ದೇಶಕರಾದ ಎಸ್.ಆರ್.ಪಾಟೀಲ, ಮಹೇಶ ಬಾಗೇವಾಡಿ, ಸುರೇಶ ಶೆಟ್ಟಿ, ಶ್ರೀಕಾಂತ ಪರಮನೆ, ದಿನೇಶ ಪಾಟೀಲ, ರಾಜೇಶ ಪಾಟೀಲ, ಪುಷ್ಪಾ ಕುರಬೇಟ, ವಿಜಯಾ ಶೆಟ್ಟಿ, ಸುವರ್ಣಾ ಪಟ್ಟಣಶೆಟ್ಟಿ, ಸಿಇಒ ಎಸ್.ಕೆ.ಅದನಾವರ್, ಮಹೇಶ ಶೆಟ್ಟಿ, ಸೂರಜ ಘೋಡಕೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net