ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿ

ಜಾಗನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಅಭಿನವ ಮಂಜುನಾಥ ಸ್ವಾಮೀಜಿ, ಮಾಧುಲಿಂಗ ಶ್ರೀ, ಮಾಳಪ್ಪ ಗುರಗುದ್ದಿ, ಲಕ್ಷ್ಮಣ ಮಂಗಿ ಇತರರಿದ್ದರು.
ಜಾಗನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಅಭಿನವ ಮಂಜುನಾಥ ಸ್ವಾಮೀಜಿ, ಮಾಧುಲಿಂಗ ಶ್ರೀ, ಮಾಳಪ್ಪ ಗುರಗುದ್ದಿ, ಲಕ್ಷ್ಮಣ ಮಂಗಿ ಇತರರಿದ್ದರು.
Published on
ಕಬ್ಬೂರ: ಎಷ್ಟು ಆಸ್ತಿ ಗಳಿಸಿದ್ದೇವೆ ಎನ್ನುವುದಕ್ಕಿಂತ ಮಕ್ಕಳಿಗೆ ಎಂತಹ ಸಂಸ್ಕಾರ ನೀಡುತ್ತಿದ್ದೇವೆ ಎಂಬುದು ಮುಖ್ಯವಾಗಿದೆ ಎಂದು ಕ್ಯಾರಗುಡ್ಡ ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.
ಸಮೀಪದ ಜಾಗನೂರು ಗ್ರಾಮದ ಕೆನಾಲ್ ಕೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ 7ನೇ ತರಗತಿವರೆಗೆ ಶಿಕ್ಷಣ ಪಡೆದವರಿಗೆ ಮಾತ್ರ ಸರ್ಕಾರಿ ಸೌಲಭ್ಯ ನೀಡುವ ನಿಯಮ ತರಬೇಕು ಎಂದರು. ಕುಂಚನೂರ ಮಠದ ಮಾಧುಲಿಂಗ ಶ್ರೀ ಮಾತನಾಡಿ, ಮೊಬೈಲ್‌ನಿಂದ ಮಕ್ಕಳು ದೂರ ಇರುವಂತೆ ಪಾಲಕರು ನೋಡಿಕೊಳ್ಳಬೇಕು ಎಂದರು.
ಮಾಳಪ್ಪ ಗೊರಗುದ್ದಿ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಮಂಗಿ, ಮಲ್ಲೇಶ ಹನುಮಂತಗೋಳ, ಹನುಮಂತ ಕರಿಕಟ್ಟಿ, ಲಕ್ಷ್ಮಣ ಹನುಮನ್ನವರ, ಮಹಾಂತೇಶ ಶಿರಗೂರ, ನಕುಲ ಕತ್ತಿ, ರಾಮಪ್ಪ ಗುರಗುದ್ದಿ, ಕೆಂಪಯ್ಯ ಕೊಂಗನೊಳಿ, ದುಂಡಪ್ಪ ಕರಿಕಟ್ಟಿ, ರಾಮಚಂದ್ರ ಪುಕಾಟೆ, ಪರಸಪ್ಪ ತಳವಾರ, ಹನುಮಂತ ಹಂಜಿ, ಸಿದ್ದು ಕಿಂಡಿ, ರಾಮಪ್ಪ ಖಾನಾಪುರೆ, ರಮೇಶ ಕರಿಕಟ್ಟಿ, ಅನಿಲ ಹಂಜಿ, ಆರ್.ಎಸ್.ಗುಂಡಪ್ಪಗೋಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net