ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ

 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಅಭಿನವ ಯಚ್ಚರ ಸ್ವಾಮೀಜಿ, ಪ್ರಭಾಕರ ಬಡಿಗೇರ, ರಾಜೀವ ಪಂಡಿತ, ರಾಮಕೃಷ್ಣ ಬಡಿಗೇರ ಇತರರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಅಭಿನವ ಯಚ್ಚರ ಸ್ವಾಮೀಜಿ, ಪ್ರಭಾಕರ ಬಡಿಗೇರ, ರಾಜೀವ ಪಂಡಿತ, ರಾಮಕೃಷ್ಣ ಬಡಿಗೇರ ಇತರರಿದ್ದರು.
Published on
ಬೆಳಗಾವಿ: ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಅವರಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ ಎಂದು ಶಿರೋಳ ಯಚ್ಚರಸ್ವಾಮಿ ಸಂಸ್ಥಾನ ಗವಿಮಠದ ಅಭಿನವ ಯಚ್ಚರ ಸ್ವಾಮೀಜಿ ಹೇಳಿದರು.
ವಿಶ್ವಕರ್ಮ ವಿದ್ಯಾವರ್ಧಕ ಸಂಘದಿಂದ ನಗರದ ಕಾಳಿ ಅಂಬ್ರಾಯಿಯಲ್ಲಿನ ಸಂಘದ ಸಭಾಗೃಹದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಿಯುಸಿಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಕಾರ್ತಿಕ ಬಡಿಗೇರ, ಎಸ್ಸೆಸ್ಸೆಲ್ಸಿಯಲ್ಲಿ 6ನೇ ಸ್ಥಾನ ಪಡೆದ ಗಣೇಶ ಪತ್ತಾರ ಸೇರಿದಂತೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿಶ್ವಕರ್ಮ ಸಮುದಾಯದ 62 ಎಸ್ಸೆಸ್ಸೆಲ್ಸಿ ಹಾಗೂ 26 ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತುಮಕೂರಿನಲ್ಲಿ ಬಿಎಎಂಎಸ್ ವ್ಯಾಸಂಗ ಮಾಡುತ್ತಿರುವ ಅನುಷ್ಕಾಗೆ ಪುಸ್ತಕ ದೇಣಿಗೆ ನೀಡಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ರಾಜೀವ ಪಂಡಿತ, ವಾಲ್‌ಚಂದ್ ಇಂಜಿನಿಯರಿಂಗ್ ಕಾಲೇಜ್ ಮಾಜಿ ಡೀನ್ ಡಾ.ವಿದ್ಯಾಧರ ಧರ್ಮಾಧಿಕಾರಿ, ಬಾಬು ಜತ್ತಕರ, ರಾಘವೇಂದ್ರ ಬಡಿಗೇರ, ಉದಯ ಅಮ್ಮಣಗಿ, ಡಾ.ಕಿರಣ ಪೋತದಾರ, ಶ್ರೀಕಾಂತ ಹಮಿತಖಾನಿ, ಗೋಪಾಲ ಪಂಚಾಳ, ಮೌನೇಶ ದೇಶನೂರ, ಎಂ.ಕೆ.ಬಡಿಗೇರ, ಶ್ರೀಕಾಂತ ಬಡಿಗೇರ, ರಾಮಕೃಷ್ಣ ಬಡಿಗೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net