ಯುವಕರ ನೋಂದಣಿಗೆ ಕ್ರಮ ವಹಿಸಿ

 ಬೆಳಗಾವಿಯಲ್ಲಿ ಮಂಗಳವಾರ ನಶಾ ಮುಕ್ತ ಯುವ ಅಭಿಯಾನದ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬಿಡುಗಡೆಗೊಳಿಸಿದರು. ಸಂಗ್ರಾಮ ಸಾವಂತ, ಬಸವರಾಜ ಅಡವಿಮಠ, ಬಿ.ಶ್ರೀನಿವಾಸ ಇತರರಿದ್ದರು.
ಬೆಳಗಾವಿಯಲ್ಲಿ ಮಂಗಳವಾರ ನಶಾ ಮುಕ್ತ ಯುವ ಅಭಿಯಾನದ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬಿಡುಗಡೆಗೊಳಿಸಿದರು. ಸಂಗ್ರಾಮ ಸಾವಂತ, ಬಸವರಾಜ ಅಡವಿಮಠ, ಬಿ.ಶ್ರೀನಿವಾಸ ಇತರರಿದ್ದರು.
Published on
ಬೆಳಗಾವಿ : ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವ ಮೂಲಕ ಮೈ ಭಾರತ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಯಗೊಳಿಸಬೇಕು. ಜತೆಗೆ ಈ ಅಭಿಯಾನದ ಪೋರ್ಟಲ್‌ನಲ್ಲಿ ಯುವಕರ ಗರಿಷ್ಠ ನೋಂದಣಿಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಮೈ ಭಾರತ ಜಿಲ್ಲಾ ಸಲಹಾ ಸಮಿತಿಯ ನೋಂದಣಿ ಮತ್ತು ಜಾಗೃತಿ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆ.15ರವರೆಗೆ ನಡೆಯುತ್ತಿರುವ ತೀವ್ರ ಮೈ ಭಾರತ ನೋಂದಣಿ ಮತ್ತು ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ವಿಕಸಿತ ಭಾರತದ ದೃಷ್ಟಿಕೋನಕ್ಕೆ ಕೊಡುಗೆ ನೀಡುವುದಕ್ಕಾಗಿ 15ರಿಂದ 29ವರ್ಷದೊಳಗಿನ ಅರ್ಹ ಯುವಕರು ಈ ಪೋರ್ಟಲ್‌ಗೆ ಭೇಟಿ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಯುವ ಅಧಿಕಾರಿ ಸಂಗ್ರಾಮ ಸಾವಂತ, ಜಿಪಂ ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಿ.ಶ್ರೀನಿವಾಸ, ಎನ್‌ಸಿಸಿ, ಎನ್‌ಎಸ್‌ಎಸ್, ಭಾರತ ಸ್ಕೌಟ್ಸ ಆ್ಯಂಡ್ ಗೈಡ್ಸ್ ಪ್ರತಿನಿಧಿಗಳಿದ್ದರು.
ಸಭೆಯಲ್ಲಿ ವಿಕಸಿತ್ ಭಾರತಕ್ಕಾಗಿ ನಶಾ ಮುಕ್ತ ಯುವ ಅಭಿಯಾನದ ಪೋಸ್ಟರ್ ಅನ್ನು ಔಪಚಾರಿಕವಾಗಿ ಬಿಡುಗಡೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net