ರೈತರಲ್ಲಿ ಸುಸ್ಥಿರ ಕೃಷಿ ಅರಿವು ಅಗತ್ಯ

ಬೆಳಗಾವಿಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಿಂದ ಹುಕ್ಕೇರಿ ತಾಲ್ಲೂಕಿನ ಮಾಸ್ತಿಹೊಳಿಯಲ್ಲಿ ಏರ್ಪಡಿಸಿದ್ದ ಸುಸ್ಥಿರ ಕೃಷಿ ಜಾಗೃತಿಯಲ್ಲಿ ಡಾ.ಎಸ್.ಎಂ.ವಾರದ ಪ್ರಾತ್ಯಕ್ಷಿಕೆ ನೀಡಿದರು.
ಬೆಳಗಾವಿಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಿಂದ ಹುಕ್ಕೇರಿ ತಾಲ್ಲೂಕಿನ ಮಾಸ್ತಿಹೊಳಿಯಲ್ಲಿ ಏರ್ಪಡಿಸಿದ್ದ ಸುಸ್ಥಿರ ಕೃಷಿ ಜಾಗೃತಿಯಲ್ಲಿ ಡಾ.ಎಸ್.ಎಂ.ವಾರದ ಪ್ರಾತ್ಯಕ್ಷಿಕೆ ನೀಡಿದರು.
Published on
ಬೆಳಗಾವಿ : ಕೆಎಲ್ಇ ಸಂಸ್ಥೆ ರಾಜಾ ಲಖಮಗೌಡ ವಿಜ್ಞಾನ ಸಂಸ್ಥೆಯ (ಸ್ವಾಯತ್ತ) ರಸಾಯನಶಾಸ್ತ್ರ ವಿಭಾಗದ ವತಿಯಿಂದ ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಗ್ರಾಮದಲ್ಲಿ ಬುಧವಾರ ರೈತರಿಗಾಗಿ ‘ಆರೋಗ್ಯಕರ ಮಣ್ಣು, ಉತ್ತಮ ಬೆಳೆ ಸಾವಯವ ಕೃಷಿಗಾಗಿ ಸುಸ್ಥಿರ ಗೊಬ್ಬರ ಬಳಕೆ ಪದ್ಧತಿಗಳು’ ವಿಷಯದ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಣ್ಣಿನ ಆರೋಗ್ಯಕರ ನಿರ್ವಹಣೆ ಮತ್ತು ಸಾವಯವ ಕೃಷಿಯಲ್ಲಿ ಸುಸ್ಥಿರ ರಸಗೊಬ್ಬರಗಳ ಬಳಕೆಯ ಪ್ರಾಮುಖ್ಯತೆ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮತ್ತಿಕೊಪ್ಪದ ಐಸಿಎಆರ್ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಎಸ್.ಎಂ.ವಾರದ ಮಾತನಾಡಿ, ರೈತರಿಗೆ ಮಣ್ಣಿನ ಫಲವತ್ತತೆ ಹೆಚ್ಚಿಸುವಿಕೆ,
ಪರಿಸರ ಸ್ನೇಹಿ ಪೋಷಕಾಂಶ ನಿರ್ವಹಣೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಪ್ರಾಯೋಗಿಕ ತರಬೇತಿ ಜತೆಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ರೈತರು, ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಲೇ ಇಳುವರಿ ಹೆಚ್ಚಿಸುವ ಬಗ್ಗೆ ತಜ್ಞರಿಂದ ಸಲಹೆ ಪಡೆದರು. ಈ ಸಂದರ್ಭದಲ್ಲಿ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನ ಅಧ್ಯಾಪಕ ವೃಂದ, ಎಂ.ಎಸ್ಸಿ. ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ರಸಾಯನಶಾಸ್ತ್ರ ವಿಭಾಗದ ಸ್ನಾತಕೋತ್ತರ ಸಂಯೋಜಕ ಡಾ.ಗಂಗಾಧರ ಬಬಲಾದಿಮಠ ಸ್ವಾಗತಿಸಿದರು. ಎಂ.ಎಸ್ಸಿ. ವಿದ್ಯಾರ್ಥಿನಿ ಯೋಗಿತಾ ಗುಗ್ಗರಿ ವಿಜ್ಞಾನಿಗಳನ್ನು ಪರಿಚಯಿಸಿದರು. ಮಮತಾ ಮರಡಿ ಮತ್ತು ವರ್ಷಾ ಮಳಗಲಿ ನಿರೂಪಿಸಿದರು. ಸುಶ್ಮಿತಾ ಗವಿಮಠ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net