

ಒಟ್ಟು 167 ಬ್ಲಾೃಕ್ ಸ್ಪಾಟ್
ವಾಕರಸಾ ಸಂಸ್ಥೆಯ ಭದ್ರತಾ ಮತ್ತು ಜಾಗೃತ ಇಲಾಖೆಯ ಅಧಿಕಾರಿಗಳು, ತಮ್ಮ ಬಸ್ ಕಾರ್ಯಾಚರಣೆಯ ಅನುಭವದ ಆಧಾರದ ಮೇಲೆ ಸಂಸ್ಥೆಯ 6 ಕಂದಾಯ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 167 ಅಪಘಾತ ಕಪ್ಪು ಸ್ಥಳಗಳನ್ನು ಗುರುತಿಸಿದ್ದು, ಇದಕ್ಕೆ ಸಂಬಂಧಿಸಿದ ಸಮಗ್ರವಾದ ವರದಿಯನ್ನು ಪ್ರಾತ್ಯಕ್ಷಿಕೆ ಮೂಲಕ ಸಭೆಯಲ್ಲಿ ಮಂಡಿಸಲಾಯಿತು. ಇದರಲ್ಲಿ ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯಲ್ಲೇ 49 ಅಪಘಾತ ಸ್ಥಳಗಳಿರುವುದು ಗಮನಾರ್ಹ.