ಸಮಾಜಮುಖಿ ಕಾರ್ಯ ಬೆಂಬಲಿಸುವೆ

ಅಥಣಿ ಪಟ್ಟಣದ ದಡ್ಡಿಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯಭವನ ನಿರ್ಮಾಣಕ್ಕೆ ಶಾಸಕ ಲಕ್ಷ್ಮಣ ಸವದಿ ಭೂಮಿಪೂಜೆ ನೆರವೇರಿಸಿದರು. ಕಲ್ಲಪ್ಪ ಮೇತ್ರಿ, ಲಕ್ಕಪ್ಪ ಯಂಕಚ್ಚಿ ಇತರರಿದ್ದರು.
ಅಥಣಿ ಪಟ್ಟಣದ ದಡ್ಡಿಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯಭವನ ನಿರ್ಮಾಣಕ್ಕೆ ಶಾಸಕ ಲಕ್ಷ್ಮಣ ಸವದಿ ಭೂಮಿಪೂಜೆ ನೆರವೇರಿಸಿದರು. ಕಲ್ಲಪ್ಪ ಮೇತ್ರಿ, ಲಕ್ಕಪ್ಪ ಯಂಕಚ್ಚಿ ಇತರರಿದ್ದರು.
Published on
ಅಥಣಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಲುಮತ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವ ಜತೆಗೆ ನಿಮ್ಮೆಲ್ಲ ಸಮಾಜಮುಖಿ ಕಾರ್ಯಗಳಿಗೆ ಬೆನ್ನಲುಬಾಗಿ ನಿಲ್ಲುವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ದಡ್ಡಿಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ 50 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಇನ್ನು ಹೆಚ್ಚಿನ ಅನುದಾನ ಕೊಡಿಸುವ ಭರವಸೆ ನೀಡಿದರು. ಹಾಲುಮತ ಸಮುದಾಯದವರು ಸಮುದಾಯ ಭವನದ ಸದುಪಯೋಗ ಮಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಆಗಿದೆ. ತಲಾ 25 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣವಾಗಲಿವೆ ಎಂದರು.
ಅಥಣಿ ಜಿಲ್ಲೆಯಾಗಬೇಕು ಎನ್ನುವುದು ಬಹುತೇಕರ ಬೇಡಿಕೆಯಾಗಿದೆ. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ. ಜಿಲ್ಲಾಕೇಂದ್ರದಿಂದ 200 ಕಿಮೀ ದೂರ ಕ್ರಮಿಸಲು ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ, ಅಥಣಿ ಜಿಲ್ಲೆಯಾದರೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಹಾಲುಮತ ಸಮುದಾಯದ ಅಧ್ಯಕ್ಷ ಕಲ್ಲಪ್ಪ ಮೇತ್ರಿ, ಹಿರಿಯರಾದ ಲಕ್ಕಪ್ಪ ಯಂಕಚ್ಚಿ, ಭರಮು ಮಾಕಾಣಿ, ಚಿನ್ನಪ್ಪ ಲಂಗೊಟಿ, ಅಮೋಘ ಖೊಬ್ರಿ, ಶಿವರುದ್ರ ಘೂಳಪ್ಪನವರ, ನಿಂಗಪ್ಪ ಐನಾಪೂರ, ಮಹಾದೇವ ಬಿಳಿಕುರಿ, ಬಾಬುರಾವ ಮೆಂಡಿಗೇರಿ, ಭೀರಪ್ಪ ಯಂಕಚ್ಚಿ, ಆನಂದ ಲಂಗೋಟಿ, ಆನಂದ ಮಾಕಾಣಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net