ಕಬ್ಬಿಗೆ ಗೊಣ್ಣೆ ಹುಳು ಬಾಧೆ

ಕಬ್ಬಿಗೆ ಗೊಣ್ಣೆ ಹುಳು ಬಾಧೆ
ಕಬ್ಬಿಗೆ ಗೊಣ್ಣೆ ಹುಳು ಬಾಧೆ
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿಗೆ ಗೊಣ್ಣೆ ಹುಳು ಬಾಧೆ
  • ಮಳೆ ವಿಳಂಬದಿಂದ ಹೆಚ್ಚಿದ ಕಾಟ
  • ರೈತರಿಗೆ ಸಂಕಷ್ಟ ತಂದ ಗೊಣ್ಣೆ ಹುಳು
ಕಬ್ಬು ಬೆಳೆ ಕಾಡುತ್ತಿದೆ ಗೊಣ್ಣೆ ಹುಳು ಬಾಧೆ
ಮಳೆ ಕೊರತೆಯಿಂದ ಇಳುವರಿ ಕುಸಿತದ ಭೀತಿ! | ಜಿಲ್ಲೆಯ ರೈತರಲ್ಲಿ ಹೆಚ್ಚಿದ ಆತಂಕ
ಆನಂದ ಭಮ್ಮನ್ನವರ ಚಿಕ್ಕೋಡಿ
ಈ ವರ್ಷವೂ ಕಬ್ಬು ಬೆಳೆಯಲ್ಲಿ ಗೊಣ್ಣೆ ಹುಳುವಿನ ಕಾಟ " ವಿಪರೀತವಾಗಿ, ಗೊಣ್ಣೆ ಹುಳು ನಿಯಂತ್ರಣಕ್ಕೆ ಕಬ್ಬು ಬೆಳೆಗಾರರು ಪರದಾಡುತ್ತಿದ್ದಾರೆ. ಬಾಧೆಯಿಂದ ಇಳುವರಿ ಕುಸಿತದ ಆತಂಕವೂ ಎದುರಾಗಿದೆ.
ಜೂನ್ ಮೂರನೇ ವಾರ ಬಂದರೂ ಮುಂಗಾರು ಮಳೆಯಾಗುತ್ತಿಲ್ಲ. ಮುಂಗಾರು ಬಿತ್ತನೆಯಲ್ಲಿ ಏಳುಪೇರಿದ್ದರೆ, ಲಭ್ಯ ಜಲಮೂಲ ಬೆಳೆದ ವಾಣಿಜ್ಯ ಬೆಳೆ ಕಬ್ಬಿಗೆ ಗೊಣ್ಣೆ ಹುಳು ಬಾಧೆ ಕಾಡುತ್ತಿದೆ.
ಇಳುವರಿ ಕಡಿಮೆ ಸಾಧ್ಯತೆ: ಜಿಲ್ಲೆಯಲ್ಲಿ ಒಟ್ಟು 3.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಮಳೆ ತಡವಾಗಿ ಬರುತ್ತಿರುವುದು ಹಾಗೂ ಕಬ್ಬಿನ ಬೆಳೆಯಲ್ಲಿ ಮಾಗಿ (ಆಳವಾದ)ಉಳುಮೆ ಮಾಡದೇ ಇರುವುದರಿಂದ ಗೊಣ್ಣೆ ಹುಳುಗಳ ಸಂತತಿ ವೃದ್ಧಿಸುತ್ತಿದೆ. ಕಳೆದ ವರ್ಷವೂ ಗೊಣ್ಣೆ ಹುಳುವಿನ ಕಾಟವಿತ್ತು. ರೋಗ ಬಾಧೆಯಿಂದ ಕಬ್ಬಿನ ಬೆಳೆಯಲ್ಲಿ ಶೇ.10ರಿಂದ ಶೇ.20ರಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆಯಿದೆ. ಹುಳು ನಿಯಂತ್ರಿಸಲು ಕೀಟನಾಶಕಕ್ಕಾಗಿ ಪ್ರತಿ ಎಕರೆಗೆ 2 ರಿಂದ 4 ಸಾವಿರ ರೂ. ವೆಚ್ಚ ಮಾಡಲಾಗುತ್ತಿದೆ.
ಮಳೆ ಎಲ್ಲದಕ್ಕೂ ಪರಿಹಾರ: ಬೇಸಿಗೆಯಲ್ಲಿ ಮಾಗಿ ಉಳುಮೆ ಮಾಡುವುದರಿಂದ ಜಮೀನಿನ ಕೆಳ ಮಣ್ಣು ಮೇಲೆ ಬರುತ್ತದೆ. ಕೆಳ ಮಣ್ಣು ಬಿಸಿಲಿಗೆ ಕಾಯ್ದರೆ ಗೊಣ್ಣೆ ಹುಳುವಿನ ಕೋಶಗಳು ನಾಶವಾದವು. ಉಳುಮೆ ವೇಳೆ ಪಕ್ಷಿಗಳು ಹುಳುಗಳನ್ನು ತಿಂದು ಹಾಕುತ್ತವೆ. ಜೂನ್ ತಿಂಗಳಿನಲ್ಲಿ ಸಾಕಷ್ಟು ಮಳೆ ಸುರಿದರೆ ಹುಳುಗಳು ಉಸಿರುಗಟ್ಟಿ ಸಾಯುತ್ತವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಜಾಗೃತಿ ಅಭಿಯಾನ: ರೈತರಿಗೆ ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಕೃಷಿ ಇಲಾಖೆಯಿಂದ ಭೂ ಮಾತಾ ಸಂರಕ್ಷಣಾ ಆಯೋಜಿಸಲಾಗಿದೆ. ಈ ಮೂಲಕ ರೈತರಲ್ಲಿ ಕೀಟಬಾಧೆಗೆ ಕಾರಣ ಮತ್ತು ಪರಿಹಾರ ಕ್ರಮದ ಕುರಿತು ಅರಿವು ಮೂಡಿಸಲಾಗುತ್ತಿದೆ.
ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ ಗೊಣ್ಣೆ ಹುಳು ಜಾಸ್ತಿಯಾಗಿವೆ. ಜೈವಿಕ ಗೊಬ್ಬರ ಬಳಕೆಯಿಂದ ಹುಳು ನಿಯಂತ್ರಣ ಮಾಡಬಹುದು.
| ಸಹದೇವ ಯರಗೊಪ್ಪ ಉಪನಿರ್ದೇಶಕರು, ಕೃಷಿ ಇಲಾಖೆ, ಚಿಕ್ಕೋಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net