ನಿರಂತರ ಪ್ರಯತ್ನದಿಂದ ಯಶಸ್ಸು

ಮಜಲಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿನಿಯರನ್ನು ಶಾಸಕ ಡಿ.ಎಂ.ಐಹೊಳೆ ಸನ್ಮಾನಿಸಿದರು. ಜೆ.ಪಿ. ತಂಗಡಿ, ವಿಜಯ ಕೋಟಿವಾಲೆ, ಆನಂದ ಕೋಳಿ, ಜೆ.ಪಿ.ತಂಗಡಿ ಇತರರಿದ್ದರು.
ಮಜಲಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿನಿಯರನ್ನು ಶಾಸಕ ಡಿ.ಎಂ.ಐಹೊಳೆ ಸನ್ಮಾನಿಸಿದರು. ಜೆ.ಪಿ. ತಂಗಡಿ, ವಿಜಯ ಕೋಟಿವಾಲೆ, ಆನಂದ ಕೋಳಿ, ಜೆ.ಪಿ.ತಂಗಡಿ ಇತರರಿದ್ದರು.
Published on
ಚಿಕ್ಕೋಡಿ: ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಪಾಲಕರ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ಮಜಲಟ್ಟಿ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸೋಮವಾರ ಸನ್ಮಾನಿಸಿ ಮಾತನಾಡಿದರು.
ದಿ.ಬಿ.ಆರ್.ಸಂಗಪ್ಪಗೋಳ ಅವರೊಂದಿಗೆ ಸೇರಿ ಅಂದು ನೆಟ್ಟ ಶಿಕ್ಷಣದ ಸಸಿ ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಶ್ರಮದಿಂದ ಹೆಮ್ಮರವಾಗಿ ಬೆಳೆದಿದೆ. ಮಜಲಟ್ಟಿ ಕಾಲೇಜು ದೇಶದಲ್ಲಿ ಹೆಸರು ಮಾಡುವಂತಾಗಲಿ. ಕಾಲೇಜಿಗೆ ಎಲ್ಲ ಸೌಲಭ್ಯ ನೀಡಲು ಬದ್ಧನಾಗಿದ್ದೇನೆ, ಸಾಧಕ ವಿದ್ಯಾರ್ಥಿಗಳ ಕಾರ್ಯ ಶ್ಲಾಸಿ ಲ್ಯಾಪ್‌ಟಾಪ್ ನೀಡುವುದಾಗಿ ಘೋಷಿಸಿದರು.
ಪ್ರಾಂಶುಪಾಲ ಆನಂದ ಕೋಳಿ ಮಾತನಾಡಿ, ಕಾಲೇಜಿನ ಅಭಿವೃದ್ಧಿಗೆ ಶಾಸಕರ ಸಹಕಾರ ಮತ್ತು ಎಲ್ಲರ ಒಗ್ಗಟ್ಟಿನ ಶ್ರಮ ಕಾರಣ ಎಂದು ತಿಳಿಸಿದರು.
ವಿಜಯ ಕೋಠಿವಾಲೆ ಮಾತನಾಡಿದರು. ಸಾಧಕ ವಿದ್ಯಾರ್ಥಿನಿಯರಾದ ವರ್ಷಾಂಜಲಿ ಕಾಂಬಳೆ, ಐಶ್ವರ್ಯಾ ಪೂಜಾರಿ, ಐಶ್ವರ್ಯಾ ಹಿರೇಮಠ ಹಾಗೂ ಪೂರ್ಣಿಮಾ ಕರ್ವೆನ್ನವರ ಅನಿಸಿಕೆ ಹಂಚಿಕೊಂಡರು.
ಉಪಪ್ರಾಂಶುಪಾಲ ಜೆ.ಪಿ.ತಂಗಡಿ ಮಾತನಾಡಿದರು. ಉಪನ್ಯಾಸಕ ವಿಶ್ವನಾಥ ಚೌಗಲಾ, ಆರ್.ಬಿ.ಪಾಟೀಲ, ಎಚ್.ಎಸ್.ಟಕ್ಕನ್ನವರ, ಎಂ.ಡಿ.ಚೌಗಲಾ, ಜಿ.ಆರ್. ಬಿರಾದಾರ, ಎಸ್.ಆರ್.ಹಾರೂಗೊಪ್ಪ, ಸುರೇಶ ಗಟ್ಟಿ, ಆರ್.ಆರ್.ಕಾಗಲೆ, ಎಂ.ವಿ.ಬಡಿಗೇರ, ಪ್ರಿಯಾ ಹಂಚಿನಮನಿ, ಆರ್.ಎಸ್.ಸಂಕಪಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net