ಸವದತ್ತಿಯ ಎಸ್‌ಕೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹಸಮ್ಮೇಳನದಲ್ಲಿ ಈರಣ್ಣ ಚಂದರಗಿ, ಎಂ.ಎ.ತಹಸೀಲ್ದಾರ್ ಅವರನ್ನು ಸನ್ಮಾನಿಸಲಾಯಿತು. ಜಗದೀಶ ಶಿಂತ್ರಿ, ಬಿ.ಕೆ.ಕಠಾರೆ, ಅಂಜನಾ ವಿಭೂತಿ ಇತರರಿದ್ದರು.
ನಗರದ ಕೆಎಲ್‌ಇ ಸಂಸ್ಥೆಯ ಎಸ್‌ಕೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಕಷ್ಟಗಳಿಗೆ ಭಯಪಡದೇ ಅವುಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ ಶಿಂತ್ರಿ ಮಾತನಾಡಿ, ಕೆಎಲ್‌ಇ ಸಂಸ್ಥೆ ವಿವಿಧ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿದ್ದು, ದೇಶಕ್ಕೆ ಅನೇಕ ಸಾಧಕರನ್ನು ಕೊಡುಗೆ ನೀಡಿದೆ. ಶಿಸ್ತು, ಮೌಲ್ಯ ಹಾಗೂ ಗುಣಮಟ್ಟದ ಶಿಕ್ಷಣವೇ ಕೆಎಲ್‌ಇ ಸಂಸ್ಥೆಯ ಶಕ್ತಿ ಎಂದು ಹೇಳಿದರು.
ವಸತಿನಿಲಯ ಪಾಲಕ ಎಂ.ಎ.ತಹಸೀಲ್ದಾರ್ ಮಾತನಾಡಿ, ಪಾಲಕರ ಕನಸು ನನಸು ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು. ಆಡಳಿತ ಮಂಡಳಿ ಸದಸ್ಯರಾದ ಎಂ.ಜಿ.ಪಾಟೀಲ, ಎಸ್.ಬಿ.ಗುಡೆನ್ನವರ, ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷೆ ಎಂ.ಬಿ.ವಾಲಿ, ವಿದ್ಯಾರ್ಥಿ ಪ್ರತಿನಿಧಿ ವೇದಿಕಾ ವೈದ್ಯ, ಎಂ.ಆರ್.ಶಿವಾನಾಯ್ಕರ,