ಗುರಿಯಿಂದ ಯಶಸ್ಸು ಸಾಧ್ಯ

ಅರಟಾಳ ಗ್ರಾಮದ ಘಾಟಗೆ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ  ಬೀಳ್ಕೊಡುಗೆ ಸಮಾರಂಭದಲ್ಲಿ ಬಿ.ಎಸ್.ಕಾಟವಾಣಿ, ಅರ್ಪಿತಾ ಢಂಗಿ, ಪವನ ಘಾಟಗೆ, ಸೋಮಣ್ಣ ಬೆಟಗೇರಿ ಇತರರಿದ್ದರು.
ಅರಟಾಳ ಗ್ರಾಮದ ಘಾಟಗೆ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಬಿ.ಎಸ್.ಕಾಟವಾಣಿ, ಅರ್ಪಿತಾ ಢಂಗಿ, ಪವನ ಘಾಟಗೆ, ಸೋಮಣ್ಣ ಬೆಟಗೇರಿ ಇತರರಿದ್ದರು.
Published on
ಅರಟಾಳ: ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಸಾಧ್ಯ ಎಂದು ಶಿಕ್ಷಕ ಬಿ.ಎಸ್.ಕಾಟವಾಣಿ ಹೇಳಿದರು. ಗ್ರಾಮದ ಘಾಟಗೆ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಿಸಿದ ಗುರು ದೇವರ ಸಮಾನ. ಗುರುವಿನ ಮೇಲೆ ನಂಬಿಕೆಯಿಟ್ಟು ಕಲಿಯುವವರು ಸಾಧನೆ ಮಾಡುತ್ತಾರೆ ಎಂದರು. ಶಿಕ್ಷಕಿ ಅರ್ಪಿತಾ ಢಂಗಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ. ದೊರೆತ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ನಿವೃತ್ತ ಶಿಕ್ಷಕ ಅಶೋಕ ದೊಡಮನಿ ಹಾಗೂ ಸಾವಿತ್ರಿಬಾಯಿ ುಲೆ ಅಕ್ಷರಶ್ರೀ ಶಿಕ್ಷಕಿ ಪ್ರಶಸ್ತಿ ಪಡೆದ ಅರ್ಪಿತಾ ಢಂಗಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಪವನ ಘಾಟಗೆ, ಸೋಮಣ್ಣ ಬೇಟಗೇರಿ, ರಾಜು ಡಂಗಿ, ಮುಖ್ಯಶಿಕ್ಷಕಿ ಎಸ್.ಜಿ.ಹತ್ತಿ, ಎಂ.ವೈ.ಉತ್ನಾಳ, ಯಾಸೀನ್ ಕರ್ಜಗಿ, ಎಸ್.ಬಿ.ಈಸರಗೊಂಡ, ಶ್ರೀಶೈಲ ಪೂಜಾರಿ, ಸಚಿನ ಢಂಗಿ, ನಿರ್ಮಲಾ ಜಮಖಂಡಿ, ವಿನಾಯಕ ಸಾಳುಂಕೆ, ಹನುಮಂತ ಬಡಿಗೇರ, ಅಕ್ಷಯ ಘಾಟಗೆ, ಅಮಿತ ಸನದಿ, ಕಲ್ಲಪ್ಪ ಪಡಸಲಗಿ, ಆನಂದ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net