ಆಯೋಗದ ಮುಂದೆ ಜಿಲ್ಲೆಯ 4,500 ಅರ್ಜಿಗಳಿವೆ. ಇದರಲ್ಲಿ 3,850 ಪ್ರಕರಣ ವಿಚಾರಣಾ ಹಂತದಲ್ಲಿವೆ. ಇಲ್ಲಿನ ಜಿಲ್ಲಾಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಕುಂದುಕೊರತೆ ಸಭೆಗೂ ಬರುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ. ರಜೆಯ ಕಾರಣ ನಮ್ಮ ಸಭೆಗೂ ಅವರು ಬಂದಿಲ್ಲ. ಈ ವಿಷಯವನ್ನು ಆಯೋಗ ಗಂಭೀರವಾಗಿ ತೆಗೆದುಕೊಂಡಿದೆ. ಇಂದಿನ ಸಭೆಯ ನಡಾವಳಿಯನ್ನು ಅವರಿಗೆ ಕಳುಹಿಸಿ, ಶೀಘ್ರ ಕಾರ್ಯಗತಗೊಳಿಸಲು ಸೂಚಿಸುತ್ತೇವೆ. ಪರಿಶಿಷ್ಟ ಜಾತಿ, ವರ್ಗದ ಗುತ್ತಿಗೆದಾರರಿಗೆ ಕೊಡಬೇಕಿರುವ ಟೆಂಡರ್‌ಗಳನ್ನು ಕಡ್ಡಾಯವಾಗಿ ನೀಡುವಂತೆಯೂ ಅಧಿಕೃತ ಆದೇಶ ಮಾಡುತ್ತೇವೆ ಎಂದು ತಿಳಿಸಿದರು.