ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಅವಶ್ಯ

ಚಿಕ್ಕೋಡಿ ಪಟ್ಟಣದ ಸಿಎಲ್‌ಇ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕೌಶಲ ಅಭಿವೃದ್ಧಿ ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಹಾಂತೇಶ ಕವಟಗಿಮಠ, ಸಂಪಾದನಾ ಸ್ವಾಮೀಜಿ, ಸುಭಾಷ ಕಮಲಾಪುರೆ, ಶ್ರೀಕಾಂತ ಚನ್ನವರ ಇತರರಿದ್ದರು.
ಚಿಕ್ಕೋಡಿ ಪಟ್ಟಣದ ಸಿಎಲ್‌ಇ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕೌಶಲ ಅಭಿವೃದ್ಧಿ ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಹಾಂತೇಶ ಕವಟಗಿಮಠ, ಸಂಪಾದನಾ ಸ್ವಾಮೀಜಿ, ಸುಭಾಷ ಕಮಲಾಪುರೆ, ಶ್ರೀಕಾಂತ ಚನ್ನವರ ಇತರರಿದ್ದರು.
Published on
\ಪಟ್ಟಣದ ಸಿಎಲ್‌ಇ ಸಂಸ್ಥೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕೌಶಲ ಅಭಿವೃದ್ಧಿ ತರಬೇತಿಗಳಾದ ಸಿ ಆ್ಯಂಡ್ ಸಿ, ಆಪರೇಟರ್ ಕೋರ್ಸ್, ಮೋಟಾರ್ ಡ್ರೈವಿಂಗ್ ಕೋರ್ಸ್ ಹಾಗೂ ಮೋಟಾರ್ ವೈಂಡಿಂಗ್ ಕೋರ್ಸ್‌ಗಳನ್ನು ಉದ್ಘಾಟಿಸಿ ಮಾತಮಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ಭವಿಷ್ಯ ರೂಪಿಸಲು ಕೌಶಲ ತರಬೇತಿ ಅವಶ್ಯ. ಸೃಜನಶೀಲ ಶಕ್ತಿ, ಮಾನವೀಯ ಮೌಲ್ಯ ಮತ್ತು ಬದುಕು ರೂಪಿಸಿಕೊಳ್ಳುವುದನ್ನು ಕಲಿಸುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಿದ್ಧರಿರಬೇಕು. ಜನಸೇವೆಯಲ್ಲಿ ಕವಟಗಿಮಠ ಮನೆತನದ ಕಾರ್ಯ ಶ್ಲಾಘನೀಯ ಎಂದರು.
ಹಿರಿಯರಾದ ಸುಭಾಷ ಕಮಲಾಪುರೆ, ಸಿಎಲ್‌ಇ ಸಂಸ್ಥೆ ಕಾರ್ಯಧ್ಯಕ್ಷ ಶ್ರೀಕಾಂತ ಚನ್ನವರ, ಕಾರ್ಯದರ್ಶಿ ಜಗದೀಶ ಕವಟಗಿಮಠ, ಜಂಟಿ ಕಾರ್ಯದರ್ಶಿ ಎನ್.ಎಸ್.ವಂಟಮುತ್ತೆ, ನಿರ್ದೇಶಕ ಶಿವಾನಂದ ಚೊಣ್ಣದ, ಮಹಾಂತೇಶ ಬಾತೆ, ಮಲ್ಲಿಕಾರ್ಜುನ ಕವಟಗಿಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net