ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ

ಬೆಳಗಾವಿಯ  ಕೆಎಲ್‌ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಜರುಗಿದ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆಯಲ್ಲಿ ಡಾ.ಎ.ಎಸ್.ಅಮೋಘಿಮಠ, ಡಾ.ವಿ.ಪಿ.ಕುರಿ,ಡಿ.ಕೆ.ಕುಲಕರ್ಣಿ, ಡಾ.ಎಸ್.ಕೆ.ತವಾರ ಇತರರಿದ್ದಾರೆ.
ಬೆಳಗಾವಿಯ ಕೆಎಲ್‌ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಜರುಗಿದ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆಯಲ್ಲಿ ಡಾ.ಎ.ಎಸ್.ಅಮೋಘಿಮಠ, ಡಾ.ವಿ.ಪಿ.ಕುರಿ,ಡಿ.ಕೆ.ಕುಲಕರ್ಣಿ, ಡಾ.ಎಸ್.ಕೆ.ತವಾರ ಇತರರಿದ್ದಾರೆ.
Published on
ಬೆಳಗಾವಿ: ಇಲ್ಲಿನ ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಗುರುವಾರ ಉದ್ಘಾಟನೆಗೊಂಡಿತು.
ಮುನವಳ್ಳಿಯ ಬಿ.ಎಫ್.ಎಲಿಗಾರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ಎಸ್.ಅಮೋಘಿಮಠ ಒಕ್ಕೂಟ ಉದ್ಘಾಟಿಸಿ, ವಿದ್ಯಾರ್ಥಿಯ ಭವಿಷ್ಯತ್ತಿನ ವೃತ್ತಿಯ ಕುರಿತಾಗಿ ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವಿ.ಪಿ.ಕುರಿ ಅಧ್ಯಕ್ಷತೆ ವಹಿಸಿದ್ದರು. ಐಶ್ವರ್ಯ ಸಿ.ಕೆ. ಪ್ರಾರ್ಥಿಸಿದರು. ರಕ್ಷಿತಾ ಕೊಂತಿ ಅವರ ಭರತನಾಟ್ಯ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಸಂಯೋಜಕ ಡಿ.ಕೆ.ಕುಲಕರ್ಣಿ ಸ್ವಾಗತಿಸಿದರು. ಡಾ.ಎಸ್.ಕೆ.ತಳವಾರ ಅತಿಥಿ ಪರಿಚಯಿಸಿದರು. ಪಾಂಡುರಂಗ ಶಿಂಧೆ ಮತ್ತು ಸೃಷ್ಟಿ ಮಠದಕರ ನಿರೂಪಿಸಿದರು. ಒಕ್ಕೂಟ ಕಾರ್ಯದರ್ಶಿ ಮಂಜುನಾಥ ಪೂಜೇರ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿ ವರ್ಗದವರು ಮತ್ತು ಪ್ರಶಿಕ್ಷಣಾರ್ಥಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net