ನೀರು ಸ್ಥಗಿತಗೊಳಿಸಿದರೆ ತೀವ್ರ ಪ್ರತಿಭಟನೆ

ಸವದತ್ತಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಮಾತನಾಡಿದರು. ವಿಜಯ ಕುಲಕರ್ಣಿ, ಜಗದೀಶ ಕೌಜಗೇರಿ, ಅಣ್ಣಪ್ಪಗೌಡ ಪಾಟೀಲ ಇತರರಿದ್ದರು.
ಸವದತ್ತಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಮಾತನಾಡಿದರು. ವಿಜಯ ಕುಲಕರ್ಣಿ, ಜಗದೀಶ ಕೌಜಗೇರಿ, ಅಣ್ಣಪ್ಪಗೌಡ ಪಾಟೀಲ ಇತರರಿದ್ದರು.
Published on
ಸವದತ್ತಿ: ಮಲಪ್ರಭಾ ಜಲಾಶಯದಿಂದ ಮಾರ್ಚ್ ಮೊದಲ ವಾರದವರೆಗೆ ನಿರಂತರವಾಗಿ ನೀರು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಸವದತ್ತಿ ಸೇರಿ ಅಚ್ಚುಕಟ್ಟು ಪ್ರದೇಶದ ಎಲ್ಲ ತಾಲೂಕುಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಎಚ್ಚರಿಸಿದರು.
ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ರೈತರು ನಷ್ಟ ಅನುಭವಿಸಿದ್ದು, ಹಿಂಗಾರು ಬೆಳೆಗಳು ರೈತರ ಏಕೈಕ ಆಸರೆಯಾಗಿವೆ. ಜಲಾಶಯದಲ್ಲಿ ಇನ್ನೂ ನೀರಿನ ಪ್ರಮಾಣವಿದ್ದು, ಮಾರ್ಚ್ ಮೊದಲ ವಾರದವರೆಗೆ ನೀರು ಹರಿಸಿದರೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾವುದಿಲ್ಲ ಎಂದರು.
ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಮಾತನಾಡಿ, ಸರ್ಕಾರ ರೈತರ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಫೆ.೨೧ರಿಂದ ನೀರು ಬಂದ್ ಮಾಡಿದರೆ ರೈತರೊಂದಿಗೆ ಸೇರಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಗದೀಶ ಕೌಜಗೇರಿ, ಗಿರೀಶ ಬಿಳಗಿ, ವಿಜಯ ಕುಲಕರ್ಣಿ, ಅಣ್ಣಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಬಿಳಗಿ, ಪಿ.ಎಚ್.ಹಿರೇಗೌಡ್ರ, ವಿನಾಯಕ ನಾಯ್ಕರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net