ಸರ್ಕಾರಿ ಶಾಲೆ ಉನ್ನತಿಗೆ ಶ್ರಮಿಸಿ

ಜಂಬಗಿ ಗ್ರಾಮದಲ್ಲಿ ಅಧಿರಾ ೌಂಡೇಷನ್ ವತಿಯಿಂದ ಶಾಸಕ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಲಾಯಿತು. ವಿನಾಯಕ ಬಾಗಡಿ, ಪ್ರದೀಪ ಗುಂಡ, ಯಶವಂತ ಪಾಟೀಲ, ರಾಜು ಪಾಟೀಲ ಇತರರಿದ್ದರು.
ಜಂಬಗಿ ಗ್ರಾಮದಲ್ಲಿ ಅಧಿರಾ ೌಂಡೇಷನ್ ವತಿಯಿಂದ ಶಾಸಕ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಲಾಯಿತು. ವಿನಾಯಕ ಬಾಗಡಿ, ಪ್ರದೀಪ ಗುಂಡ, ಯಶವಂತ ಪಾಟೀಲ, ರಾಜು ಪಾಟೀಲ ಇತರರಿದ್ದರು.
Published on
ಸಂಬರಗಿ: ಕೊಕಟನೂರು ಕೃಷಿ ಕಾಲೇಜಿನ ಶಿಲಾನ್ಯಾಸ, ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಶೀಘ್ರದಲ್ಲೆ ಚಾಲನೆ ನೀಡುವರು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ಜಂಬಗಿಯಲ್ಲಿ ಜನ್ಮದಿನ ನಿಮಿತ್ತ ಅಧಿರಾ ೌಂಡೇಷನ್ ವತಿಯಿಂದ ಪ್ರಾಥಮಿಕ ಮರಾಠಿ ಮತ್ತು ಕನ್ನಡ ಶಾಲೆಗಳ ವಿದ್ಯಾರ್ಥಿಗಳ ಕಲಿಕೆಯಾಗಿ 11 ಕಂಪ್ಯೂಟರ್ ಮತ್ತು ಎರಡು ಶುದ್ಧ ನೀರಿನ ಯಂತ್ರವನ್ನು ಶನಿವಾರ ವಿತರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಂಡು ಹಸಿರು ಕ್ರಾಂತಿ ಮಾಡಿದ್ದೇವೆ. ಜನರಿಗೆ ನೀಡಿದ ಭರವಸೆ ಪೂರ್ಣಗೊಳಿಸಿದ್ದೇವೆ. ರಾಜ್ಯದಲ್ಲಿ ಅಥಣಿ ಕ್ಷೇತ್ರವು ಮಾದರಿಯಾಗಿದೆ. ಅಧಿರಾ ೌಂಡೇಷನ್‌ನಂತೆ ಎಲ್ಲರೂ ಸರ್ಕಾರಿ ಶಾಲೆಗಳೊಂದಿಗೆ ಕೈ ಜೋಡಿಸಿದೆ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ನೀಡಲು ಸಾಧ್ಯ ಎಂದರು.
ಶಿಕ್ಷಕ ವಿ.ಎ.ಕಣ್ಣೂರು ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಅವರ ಕೆಲಸ ಗಡಿ ಪ್ರದೇಶದ ಜನರಿಗೆ ಅಮೂಲ್ಯವಾಗಿದೆ ಎಂದು ಹೇಳಿದರು. ಶಿರೂರ ಕೊಂಡಿಬಾ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಅಧಿರಾ ೌಂಡೇಷನ್ ಅಧ್ಯಕ್ಷ ಪ್ರದೀಪ ಗುಂಡಾಜಾಧವ, ಯಶವಂತಗೌಡ ಪಾಟೀಲ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಹಾದೇವ ಕೋರೆ, ಜಿಪಂ ಮಾಜಿ ಸದಸ್ಯ ವಿನಾಯಕ ಬಾಗಡಿ, ಪಿಕೆಪಿಎಸ್ ಅಧ್ಯಕ್ಷ ನಿಜಗುಣೆ ಮಗದುಮ್ಮ, ಸಂಜಯ ಅದಾಟೆ, ರಾವಸಾಹೇಬ ಬೇವನೂರ, ಪ್ರಶಾಂತ ಅಜುರ, ದತ್ತ ವಾಸ್ಟಾರ, ರಾಜೀವ ಗುಡೋಡಗಿ, ಜಂಬಗಿ ಪಿಕೆಪಿಎಸ್ ಅಧ್ಯಕ್ಷ ರಾಜು ಪಾಟೀಲ, ಅಬ್ದುಲ್ ಮುಲ್ಲಾ,
ಅಣ್ಣಾಸಾಹೇಬ ಮಿಸಾಳ, ಡಾ.ಶ್ರೀಕಾಂತ ಕನೂರ, ಪೋಪಟ್ ಜಾಧವ, ಶಶಿಧರ ಕುಂಬಾರ, ತುಕಾರಾಮ ಶೆಳಕಿ, ವಿಶಾಲ ನಿಂಬಾಳ, ತಾಪಂ ಸದಸ್ಯ ವಿಜಯ ಪಾಟೀಲ, ಸಂಜಯ ಉಂಬ್ರೆ, ಸಿದ್ಧಾರ್ಥ ಅವಾಲೇಕರ, ಬಾಬು ಮೆಂಡಿಗಿರಿ, ಮಹಾದೇವ ಬಿಳಿಕುರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net