ಧ್ಯಾನ ಕೇಂದ್ರಗಳಿಂದ ಒತ್ತಡ ದೂರ

ರಾಯಬಾಗ ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಕಟ್ಟಡ ನಿರ್ಮಾಣಕ್ಕೆ ವಿಪ ಮಾಜಿ ಸದಸ್ಯ ವಿವೇಕರಾವ ಪಾಟೀಲ ಚಾಲನೆ ನೀಡಿದರು. ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಬಿಕೆ ಅಂಬಿಕಾ, ಅಶೋಕ ಅಂಗಡಿ, ಬಿಕೆ ಮೀರಾ, ಶಶಿಕಾಂತ ಕುಲಗುಡೆ ಇತರರಿದ್ದರು.
ರಾಯಬಾಗ ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಕಟ್ಟಡ ನಿರ್ಮಾಣಕ್ಕೆ ವಿಪ ಮಾಜಿ ಸದಸ್ಯ ವಿವೇಕರಾವ ಪಾಟೀಲ ಚಾಲನೆ ನೀಡಿದರು. ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಬಿಕೆ ಅಂಬಿಕಾ, ಅಶೋಕ ಅಂಗಡಿ, ಬಿಕೆ ಮೀರಾ, ಶಶಿಕಾಂತ ಕುಲಗುಡೆ ಇತರರಿದ್ದರು.
Published on
ರಾಯಬಾಗ: ಸಾಧನೆ ಮಾಡಿದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಾಧನೆ ಮಾಡಬೇಕು ಎಂದು ಪರಮಾನಂದವಾಡಿ ಗುರುದೇವ ಆಶ್ರಮದ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಚಿಂಚಲಿ ರಸ್ತೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಷ್ಟಗಳನ್ನು ಸಮರ್ಥವಾಗಿ ಎದುರಿಸಬೇಕು. ಒತ್ತಡದಿಂದ ಮುಕ್ತರಾಗಲು ಧ್ಯಾನ ಕೇಂದ್ರಗಳು ಹೆಚ್ಚಾಗಬೇಕು ಎಂದರು.
ಬಿಕೆ ಅಂಬಿಕಾ ಅಕ್ಕ ಮಾತನಾಡಿ, ಪ್ರತಿಯೊಬ್ಬರೂ ಧ್ಯಾನ ಮಾಡಿ ಶ್ರೇಷ್ಠ ಜೀವನ ಹೊಂದಬೇಕು ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ವಿವೇಕರಾವ ಪಾಟೀಲ ಚಾಲನೆ ನೀಡಿದರು. ಅಶೋಕ ಅಂಗಡಿ, ಬಿಕೆ ಪುಷ್ಪಾ, ಬಿಕೆ ಮೀರಾ, ಬಿಕೆ ಸುವರ್ಣಾ, ಬಿಕೆ ಸುಮಂಗಲಾ, ಶಶಿಕಾಂತ ಕುಲಗುಡೆ, ಬಿ.ಎಂ.ಮಾಳಿ, ಎ.ಬಿ.ಮಂಗಸೂಳೆ, ಧರೆಪ್ಪ ಮಿರ್ಜೆ, ಎಚ್.ಎ.ಭಜಂತ್ರಿ, ಅಪ್ಪಾಸಾಹೇಬ ಮುಗಳಖೋಡ, ಲಗಮಣ್ಣ ಪಾಟೀಲ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net