ಬಿಎಸ್‌ಎನ್‌ಎಲ್ ಸೇವೆ ಸುಧಾರಣೆಗೆ ಕ್ರಮ

ಬೆಳಗಾವಿಯಲ್ಲಿ ಜರುಗಿದ ಟೆಲಿಕಾಂ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಜಗದೀಶ ಶೆಟ್ಟರ ಅವರನ್ನು ವಿಕಾಸ ಜೈಕರ ಸ್ವಾಗತಿಸಿ ಕೊಂಡರು.
ಬೆಳಗಾವಿಯಲ್ಲಿ ಜರುಗಿದ ಟೆಲಿಕಾಂ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಜಗದೀಶ ಶೆಟ್ಟರ ಅವರನ್ನು ವಿಕಾಸ ಜೈಕರ ಸ್ವಾಗತಿಸಿ ಕೊಂಡರು.
Published on
ಬೆಳಗಾವಿ: ನವದೆಹಲಿಯ ಸಂವಹನ ಸಚಿವರೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಸೇವೆಗಳ ಸುಧಾರಣೆಗೆ ಕ್ರಮ ವಹಿಸಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಟೆಲಿಕಾಂ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ಹೊಸದಾಗಿ 4ಜಿ ಟವರ್‌ಗಳನ್ನು ಸ್ಥಾಪಿಸುವ ಮೂಲಕ ವ್ಯಾಪ್ತಿಯನ್ನು ಸುಧಾರಿಸುವ ಕುರಿತು ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು. ಬಿಎಸ್‌ಎನ್‌ಎಲ್ ಪ್ರಧಾನ ವ್ಯವಸ್ಥಾಪಕ ವಿಕಾಸ ಜೈಕರ ಈಚಿನ ಬೆಳವಣಿಗೆಗಳ ಬಗ್ಗೆ ವಿವರಿಸಿದರು.
ಡಿಜಿಎಂಗಳಾದ ಜಿ.ದೇವೇಂದ್ರನ್, ಅರುಣ ಉಗರಗೋಳ, ಮಹಾದೇವ ಪಾಟೀ ಹಾಗೂ ಟೆಲಿಕಾಂ ಸಲಹಾ ಸಮಿತಿ ಸದಸ್ಯರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net