ದೇವಸ್ಥಾನ ಸಮಗ್ರ ಅಭಿವೃದ್ಧಿಗೆ ಕ್ರಮ

 ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಕೆಎಎಸ್ ಅಧಿಕಾರಿ ಪ್ರಭಾವತಿ ಕೀರಪುರ ಅವರನ್ನು ದೇವಸ್ಥಾನ ವತಿಯಿಂದ ಸನ್ಮಾನಿಸಲಾಯಿತು. ನಾಗರತ್ನಾ ಚೋಳಿನ, ಮಲ್ಲಿಕಾರ್ಜುನ ಹೆಗ್ಗನ್ನವರ ಇತರರಿದ್ದರು.
ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಕೆಎಎಸ್ ಅಧಿಕಾರಿ ಪ್ರಭಾವತಿ ಕೀರಪುರ ಅವರನ್ನು ದೇವಸ್ಥಾನ ವತಿಯಿಂದ ಸನ್ಮಾನಿಸಲಾಯಿತು. ನಾಗರತ್ನಾ ಚೋಳಿನ, ಮಲ್ಲಿಕಾರ್ಜುನ ಹೆಗ್ಗನ್ನವರ ಇತರರಿದ್ದರು.
Published on
ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಮಿತಿಯೊಂದಿಗೆ ಎರಡು ದಿನಗಳಲ್ಲಿ ಸಭೆ ನಡೆಸಿ ಗುಡ್ಡದ ಅಭಿವೃದ್ಧಿ ಹಾಗೂ ಕಾರ್ಯವ್ಯಾಪ್ತಿ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
ಯಲ್ಲಮ್ಮನಗುಡ್ಡ ಉತ್ತರ ಕರ್ನಾಟಕದ ಪ್ರಸಿದ್ಧ ದೇವಸ್ಥಾನವಾಗಿದೆ. ಇಲ್ಲಿಗೆ ಬರುವ ಭಕ್ತರು ಹಾಗೂ ಗಣ್ಯರಿಗೆ ದರ್ಶನ ಮಾಡಿಸುವ ವಿಚಾರವಾಗಿ ಶಿಷ್ಟಾಚಾರ ಪಾಲನೆ ಜತೆಗೆ ವಸತಿ, ಶುದ್ಧ ಕುಡಿಯುವ ನೀರು, ಸರತಿ, ಎಣ್ಣೆಹೊಂಡ, ದೇವಸ್ಥಾನ ಪ್ರಾಂಗಣ ಸೇರಿ ಗುಡ್ಡದಲ್ಲಿ ಶುಚಿತ್ವಕ್ಕೆ ಒತ್ತು ಕೊಡಲಾಗುವುದು. ದೇವಸ್ಥಾನದ ಧಾರ್ಮಿಕ ಪದ್ಧತಿಗಳನ್ನೇ ಎಂದಿನಂತೆ ಮುಂದುವರಿಸಲಾಗುವುದು. ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ ಎಂದರು.
ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಮಂಜುನಾಥ ಅಂಗಡಿ, ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಮಲ್ಲು ಜಕಾತಿ, ಶೀತಲ ಕಡಟ್ಟಿ, ಡಿ.ಕೆ.ನಿಂಬಾಳ, ವೀರೇಶ ಬ್ಯಾಹಟ್ಟಿ, ಅಲ್ಲಮಪ್ರಭು ಪ್ರಭುನವರ,
ಎಸ್.ಎಂ.ಮುದಗಲ್ಲ, ತವನಪ್ಪ ಅಷ್ಟಗಿ, ಅಮೀನ್ ಗೋರಿನಾಯ್ಕ, ಪವನ ಅಂಗಡಿ, ಪ್ರಜ್ವಲ ತೊಂಡಿಕಟ್ಟಿ, ಪ್ರಕಾಶ ಲಮಾಣಿ, ಅಶ್ವಿನಿ ಬೆಳ್ಳೆರಿಮಠ, ಆರ್.ಎಸ್.ಸವದತ್ತಿ, ಸಿ.ಎನ್. ಕುಲಕರ್ಣಿ, ಪ್ರಭು ಹಂಜಗಿ, ಎನ್.ಎಂ.ಮುದಗೌಡರ, ಡಿ.ಆರ್.ಚವ್ಹಾಣ, ವಿಶ್ವನಾಥಗೌಡ ರೇಣ್ಕೀಗೌಡ್ರ, ಪಂ.ಯಡೂರಯ್ಯ, ಪರಸನಗೌಡ ರೇಣ್ಕೀಗೌಡ್ರ, ಬಸನಗೌಡ ಪರಷರುಷಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net